
ಮಲೆನಾಡಿನಲ್ಲಿ ತಗ್ಗಿದ ಮುಂಗಾರು ಮಳೆ : ಕುಗ್ಗಿದ ಡ್ಯಾಂಗಳ ಒಳಹರಿವು!
ಶಿವಮೊಗ್ಗ (shivamogga), ಜು. 11: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆಯ (monsoon rain) ತೀವ್ರತೆ ಕಡಿಮೆಯಾಗಿದೆ. ನದಿಗಳ (rivers) ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಇದರಿಂದ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ (dams inflow) ಕುಸಿತವಾಗಿದೆ. ಮತ್ತೊಂದೆಡೆ, ಗುರುವಾರ ತಾಪಮಾನದ (temperature) ಪ್ರಮಾಣದಲ್ಲಿ ಏರಿಕೆಯಾಗಿದೆ.’
ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ (linganamakki dam) ನೀರಿನ ಒಳಹರಿವು 13,128 ಕ್ಯೂಸೆಕ್ ಗೆ ಇಳಿಕೆಯಾಗಿದೆ. 3422 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (out flow). ಪ್ರಸ್ತುತ ಡ್ಯಾಂ ನೀರಿನ ಮಟ್ಟ 1772. 1 (ಗರಿಷ್ಠ ಮಟ್ಟ : 1819) ಅಡಿಯಿದೆ.
ಭದ್ರಾ ಡ್ಯಾಂ (bhadra dam) ಒಳಹರಿವು ಕೂಡ ಇಳಿಕೆಯಾಗಿದ್ದು, 6246 ಕ್ಯೂಸೆಕ್ ಇದೆ. 158 ಕ್ಯೂಸೆಕ್ (cusec) ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 136 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ (last year) ಇದೇ ದಿನದಂದು ಡ್ಯಾಂ ನೀರಿನ ಮಟ್ಟ 140. 1 ಅಡಿಯಿತ್ತು.
ಉಳಿದಂತೆ ತುಂಗಾ ಡ್ಯಾಂನ (tunga dam) ಒಳಹರಿವು 8869 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಈಗಾಗಲೇ ಡ್ಯಾಂನ ಗರಿಷ್ಠ ಮಟ್ಟವಾದ 588. 24 ಅಡಿ ತಲುಪಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ಟಿಬಿ ಡ್ಯಾಂಗೆ (hosapete tungabhadra dam) ಹರಿ ಬಿಡಲಾಗುತ್ತಿದೆ.
ಮಳೆ ವಿವರ: ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಈ ಮುಂದಿನಂತಿದೆ. ಶಿವಮೊಗ್ಗ (shimoga) 7. 40 ಮಿಲಿ ಮೀಟರ್ (ಮಿ.ಮೀ.), ಭದ್ರಾವತಿ (bhadravathi) 5. 10 ಮಿ.ಮೀ., ತೀರ್ಥಹಳ್ಳಿ (thirthalli) 28. 90 ಮಿಮೀ, ಸಾಗರ (sagara) 20. 60 ಮಿಮೀ, ಶಿಕಾರಿಪುರ (shikaripura) 4. 60 ಮಿಮೀ, ಸೊರಬ (soraba) 10. 80 ಮಿಮೀ ಹಾಗೂ ಹೊಸನಗರದಲ್ಲಿ (hosanagara) 28.80 ಮಿಮೀ ವರ್ಷಧಾರೆಯಾಗಿದೆ.
ಪಶ್ಚಿಮಘಟ್ಟ (western ghats) ವ್ಯಾಪ್ತಿಯ ಪ್ರದೇಶಗಳಲ್ಲಿಯೂ ವರ್ಷಧಾರೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಮಾಣಿಯಲ್ಲಿ (mani) 61 ಮಿಮೀ, ಯಡೂರು (yadur) 50 ಮಿಮೀ, ಹುಲಿಕಲ್ (hulikal) 41 ಮಿಮೀ, ಮಾಸ್ತಿಕಟ್ಟೆ (masthikatte) 41 ಮಿಮೀ, ಚಕ್ರಾ (chakra) 65 ಮಿಮೀ, ಸಾವೇಹಕ್ಲು (savehaklu) 66 ಮಿಮೀ ಮಳೆಯಾಗಿದೆ.