
ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದ್ದ ಸರ್ಕಾರಿ ಶಾಲೆಗೆ ಮರು ಜೀವ ನೀಡಿದ ಗ್ರಾಮಸ್ಥರು!
ಶಿವಮೊಗ್ಗ (shivamogga), ಜು. 12: ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದ್ದ ಸರ್ಕಾರಿ ಶಾಲೆಯೊಂದು (govt school), ಗ್ರಾಮಸ್ಥರ ವಿಶೇಷ ಕಾಳಜಿಯಿಂದ ಮತ್ತೆ ಪುನರಾರಂಭಗೊಂಡಿರುವ ವಿಶೇಷ ಘಟನೆ ಶಿವಮೊಗ್ಗ ತಾಲೂಕಿನ ಹಿಟ್ಟೂರು (hitturu) ಗ್ರಾಮದಲ್ಲಿ ನಡೆದಿದೆ.
ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ (ratiha sangha state president h r basavarajappa) ಅವರು ಈ ಕುರಿತಂತೆ ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗ್ರಾಮಸ್ಥರು ಶಾಲೆ ಉಳಿಸಿಕೊಂಡ ಯಶೋಗಾಥೆಯ ವಿವರ ನೀಡಿದ್ದಾರೆ.
ಮಕ್ಕಳ ಕೊರತೆ : ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾರ್ಯನಿರ್ವಹಣೆ ಮಾಡುತ್ತಿತ್ತು. 1 ರಿಂದ 7 ನೇ ತರಗತಿವರೆಗೆ ನೂರಾರು ವಿದ್ಯಾರ್ಥಿಗಳು (students) ಅಭ್ಯಾಸ ಮಾಡುತ್ತಿದ್ದರು. ಕ್ರಮೇಣ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಲಾರಂಭಿಸಿತು.
ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ (private school) ಸೇರ್ಪಡೆಗೊಳಿಸಲಾರಂಭಿಸಿದರು. ಇದರಿಂದ ಪ್ರಸ್ತುತ ವರ್ಷ ಶಾಲೆಯ ಮಕ್ಕಳ ದಾಖಲಾತಿ 12 ಕ್ಕೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಶಿಕ್ಷಣ ಇಲಾಖೆಯು ಸದರಿ ಶಾಲೆಯನ್ನು ನೆರೆ ಗ್ರಾಮದ ಸರ್ಕಾರಿ ಶಾಲೆಯೊಂದಿದಗೆ ವಿಲೀನಗೊಳಿಸಲು ನಿರ್ಧರಿಸಿತ್ತು.
ಶಾಲೆ ಉಳಿಸಿಕೊಳ್ಳಲು ಮುಂದಾದ ಶಾಲಾ ಉಸ್ತುವಾರಿ ಸಮಿತಿ ಪ್ರಮುಖರು (sdmc) ಹಾಗೂ ಗ್ರಾಮಸ್ಥರು (villagers), ಖಾಸಗಿ ಶಾಲೆಗಳಿಗೆ ದಾಖಲಾಗಿದ್ದ ಮಕ್ಕಳನ್ನು ಮತ್ತೆ ಸರ್ಕಾರಿ ಶಾಲೆಗೆ ಸೇರ್ಪಡೆ ಮಾಡುವಂತೆ ಪೋಷಕರ ಮನವೊಲಿಸಿದ್ದರು.
ಜೊತೆಗೆ ಶಾಲೆಗೆ ಸ್ಪೋಕನ್ ಇಂಗ್ಲಿಷ್ (spoken english) ಹೇಳಿಕೊಡುವ ಶಿಕ್ಷಕರನ್ನು (teacher) ಪೋಷಕರೇ ನೇಮಿಸಿಕೊಂಡಿದ್ದರು. ಮತ್ತೊಂದೆಡೆ, ಶಿಕ್ಷಣ ಇಲಾಖೆ ಕೂಡ ಹೆಚ್ಚುವರಿ ಶಿಕ್ಷಕರೋರ್ವರನ್ನು ಶಾಲೆಗೆ ನಿಯೋಜಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 25 ಮಕ್ಕಳು ಹಾಗೂ ನಾಲ್ವರು ಶಿಕ್ಷಕರಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು ಅವರು ಹರಸಾಹಸ ಪಟ್ಟಿದ್ದಾರೆ.
ಬಾಗಿಲು ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆ ಉಳಿಸಿಕೊಂಡ ಗ್ರಾಮಸ್ಥರ ಕಾರ್ಯ ನಿಜಕ್ಕೂ ಅಭಿನಂದನೀಯವಾಗಿದೆ ಎಂದು ಹೆಚ್.ಆರ್.ಬಸವರಾಜಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.