
ಚೆನ್ನೈ – ಶಿವಮೊಗ್ಗ ರೈಲು ಸಂಚಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ
ಶಿವಮೊಗ್ಗ, ಜು. 13: ಚೆನ್ನೈ – ಶಿವಮೊಗ್ಗ (chennai – shivamogga) ನಡುವೆ ಸಂಚರಿಸುವ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು (express train) ಸಂಚಾರಕ್ಕೆ ಶನಿವಾರ ಸಂಜೆ, ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಸಂಜೆ 5. 15 ಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (mp b y raghavendra) ಅವರು ಹಸಿರು ನಿಶಾನೆ (flagged off) ತೋರ್ಪಡಿಸುವ ಮೂಲಕ ರೈಲು ಸಂಚಾರಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ್ (mla sahrada puryanaik), ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ (mlc d s arun),
ಧನಂಜಯ ಸರ್ಜಿ (mlc dhananjaya surji) ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮೊದಲಾದವರಿದ್ದರು.
ರೈಲ್ವೆ ನಿಲ್ದಾಣದ ಫ್ಲ್ಯಾಟ್’ಫಾರಂ-1 ರಲ್ಲಿ ವೇದಿಕೆ ಸಮಾರಂಭ ಆಯೋಜಿಸಲಾಗಿತ್ತು.ಸಂಸದರು, ಶಾಸಕರು, ರೈಲ್ವೆ ಅಧಿಕಾರಿಗಳು ಮಾತನಾಡಿದರು.
ಇದೇ ವೇಳೆ ವಿವಿಧ ಸಂಘಟನೆಗಳು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸನ್ಮಾನಿಸಿದವು. ಕಾರ್ಯಕ್ರಮದ ನಂತರ ಸಂಸದರು, ಶಾಸಕರು ನೂತನ ರೈಲಿನಲ್ಲಿ ಶಿವಮೊಗ್ಗದಿಂದ ಭದ್ರಾವತಿವರೆಗೆ ಪ್ರಯಾಣ ಬೆಳೆಸಿದರು.