
ಕೋಟ್ಯಾಂತರ ಆಂಡ್ರಾಯ್ಡ್ ಮೊಬೈಲ್ ಫೋನ್ ಹ್ಯಾಕಿಂಗ್ ಭೀತಿ : ಕೇಂದ್ರ ಸರ್ಕಾರ ಎಚ್ಚರಿಕೆ
ನವದೆಹಲಿ (delhi) , ಜು. 14: ಆಂಡ್ರಾಯ್ಡ್ ಮೊಬೈಲ್ ಫೋನ್ (android mobile phone) ಬಳೆಕೆದಾರರೇ ಎಚ್ಚರ… ಕಟ್ಟೆಚ್ಚರ…! ನಿಮ್ಮ ಮೊಬೈಲ್ ಫೋನ್ ಗಳು ಹ್ಯಾಕ್ (hack) ಆಗುವ ಸಾಧ್ಯತೆಯಿದೆ. ನಿಮ್ಮ ಮೊಬೈಲ್ ಫೋನ್ ಗಳಲ್ಲಿರುವ ಮಾಹಿತಿಯನ್ನು ಹ್ಯಾಕರ್ಸ್ ಗಳು (hackers) ಕದಿಯುವ ಸಾಧ್ಯತೆಯಿದೆ..!!
ಹೌದು. ಮೊಬೈಲ್ ಫೋನ್ (mobile phone) ಬಳಕೆದಾರರಿಗೆ ಗೊತ್ತಾಗದ ಹಾಗೆ, ಮೊಬೈಲ್ ಗಳಲ್ಲಿರುವ ಸೂಕ್ಷ್ಮ ಮಾಹಿತಿಗಳಿಗೆ ಕನ್ನ ಹಾಕುವ (stealing) ಹಾಗೂ ದುರುದ್ದೇಶಪೂರಿತ ಕೋಡ್ (malicious code) ಗಳನ್ನು ಮೊಬೈಲ್ ಗಳಿಗೆ ರವಾನಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ (central govt) ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸರ್ಟ್ – ಇನ್) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಈ ಮಾಹಿತಿ ಆಧಾರದ ಮೇಲೆ ಕೇಂದ್ರ ಸರ್ಕಾರವು ಪ್ರಮುಖ ಮೊಬೈಲ್ ಕಂಪೆನಿಗಳಿಗೆ (mobile companies) ಹ್ಯಾಕಿಂಗ್ ಮಾಹಿತಿ ರವಾನಿಸಿದೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸಂದೇಶ ನೀಡಿದೆ. ಇದರ ಆಧಾರದ ಮೇಲೆ ಮೊಬೈಲ್ ಕಂಪೆನಿಗಳು, ಮೊಬೈಲ್ ಫೋನ್ ಗಳು ಹ್ಯಾಕ್ ಆಗದ ರೀತಿಯಲ್ಲಿ ಸೆಕ್ಯೂರಿಟಿ ಪ್ಯಾಚ್ ಅಪ್ (security patch up) ಗಳನ್ನು ಬಿಡುಗಡೆ ಮಾಡಲಾರಂಭಿಸಿವೆ.
ಆಂಡ್ರಾಯ್ಡ್ 12, 12 ಎಲ್, 13 ಹಾಗೂ 14 ನೇ ಆವೃತ್ತಿ ಬಳಸುತ್ತಿರುವ ಗ್ರಾಹಕರ ಮೊಬೈಲ್ ಫೋನ್ ಗಳು ಅಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸದರಿ ಆವೃತ್ತಿಯ ಮೊಬೈಲ್ ಪೋನ್ ಗಳು ದೇಶದಲ್ಲಿ ಸುಮಾರು 1 ಕೋಟಿಗೂ ಅಧಿಕವಿದೆ ಎಂದು ಹೇಳಲಾಗಿದೆ.
ಗೊಂದಲ : ಆಂಡ್ರಾಯ್ಡ್ ಮೊಬೈಲ್ ಫೋನ್ (android mobile phone) ಗಳು ಹ್ಯಾಕರ್ಸ್ ಗಳ ದಾಳಿಗೆ ಒಳಗಾಗುವ ಸಾಧ್ಯತೆಯಿದೆ ಎಂಬ ಮಾಹಿತಿಯು ಬಳಕೆದಾರರಲ್ಲಿ ಸಾಕಷ್ಟು ಗೊಂದಲ ಹಾಗೂ ಆತಂಕ್ಕೆ ಕಾರಣವಾಗಿದೆ. ಯಾವ ರೀತಿಯಲ್ಲಿ ತಮ್ಮ ಮೊಬೈಲ್ ಪೋನ್ ಗಳನ್ನು ಹ್ಯಾಕ್ ಆಗದಂತೆ ತಡೆಗಟ್ಟಬೇಕು ಎಂಬುವುದು ತಿಳಿಯದೆ ಗೊಂದಲಕ್ಕೊಳಗಾಗುವಂತಾಗಿದೆ.
ಮೊಬೈಲ್ ಪೋನ್ ಗಳಿಗೆ ಬರುವ ಅನುಮಾನಾಸ್ಪದ ಲಿಂಕ್ (link) ಗಳನ್ನು ತೆರೆಯಬಾರದು. ಹಾಗೆಯೇ ಅಪಾಯಕಾರಿ ವೆಬ್’ಸೈಟ್ (website) ಗಳಿಗೂ ಭೇಟಿ ನೀಡಬಾರದು ಎಂದು ಸೈಬರ್ ತಂತ್ರಜ್ಞರು (cyber technicians) ಸಲಹೆ ನೀಡುತ್ತಾರೆ.