
ಮಲೆನಾಡು ಭಾಗದಲ್ಲಿ ಜು. 15 – 16 ರಂದು ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್!
ಶಿವಮೊಗ್ಗ, ಜು. 14: ಮಲೆನಾಡಿನಲ್ಲಿ ಮುಂಗಾರು ಮಳೆ (monsoon rain) ಮುಂದುವರಿದಿದೆ. ಆದರೆ ತೀವ್ರತೆ ಕಡಿಮೆಯಾಗಿದೆ. ಈ ನಡುವೆ ಶಿವಮೊಗ್ಗ (shimoga), ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜು. 15 ಮತ್ತು ಜು. 16 ರಂದು ಭಾರೀ ಮಳೆಯಾಗುವ (heavy rainfall) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. ರೆಡ್ ಅಲರ್ಟ್ (red alert) ಸಂದೇಶ ನೀಡಿದೆ.
ಮುಂದಿನ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಳ್ಲಿ 15 ರಿಂದ 20 ಸೆಂಟಿ ಮೀಟರ್ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ (meteorological department forecast) ಹೇಳಲಾಗಿದ್ದು, ಆರೆಂಜ್ ಅಲರ್ಟ್ (orange alert) ಎಚ್ಚರಿಕೆ ನೀಡಲಾಗಿದೆ.
ಮಳೆ ಚುರುಕು : ಶಿವಮೊಗ್ಗ ಜಿಲ್ಲೆಯಲ್ಲಿ (shimoga district) ಶನಿವಾರದಿಂದ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ಪ್ರದೇಶ (western ghats) ವ್ಯಾಪ್ತಿಯಲ್ಲಿ ಮತ್ತೆ ವರುಣ ಆರ್ಭಟಿಸಲಾರಂಭಿಸಿದ್ದಾನೆ. ಮಳೆ ದುರ್ಬಲಗೊಂಡಿದ್ದರಿಂದ ತಗ್ಗಿದ್ದ ಪ್ರಮುಖ ಜಲಾಶಯಗಳ (dams) ಒಳಹರಿವಿನಲ್ಲಿ (inflow) ಮತ್ತೆ ಏರಿಕೆ ಕಂಡುಬರಲಾರಂಭಿಸಿದೆ.
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ (Hydropower generation) ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವು (inflow) 36,197 ಕ್ಯೂಸೆಕ್ ಇದೆ. ಹೊರಹರಿವನ್ನು (outflow) ಸ್ಥಗಿತಗೊಳಿಸಲಾಗಿದ್ದು, ಮಳೆ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ.
ಪ್ರಸ್ತುತ ಡ್ಯಾಂನ ನೀರಿನ ಮಟ್ಟ 1775. 70 (ಗರಿಷ್ಠ ಮಟ್ಟ : 1819) ನೀರು ಸಂಗ್ರಹವಾಗಿದ್ದು, ಕಳೆದ 24 ಗಂಟೆ ಅವಧಿಯಲ್ಲಿ ಡ್ಯಾಂಗೆ 2. 10 ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1754. 45 ಅಡಿಯಿತ್ತು.