
ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳವು ಮಾಡುತ್ತಿದ್ದ ಭದ್ರಾವತಿಯ ಐವರು ಮಹಿಳೆಯರು ಅರೆಸ್ಟ್!
ಶಿವಮೊಗ್ಗ (shivamogga), ಜು. 14: ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಸಿ (Ksrtc) ಬಸ್ ನಿಲ್ದಾಣದಲ್ಲಿ (bus stand) ಮಹಿಳಾ ಪ್ರಯಾಣಿಕರಿಂದ ಚಿನ್ನಾಭರಣ ಅಪಹರಿಸುತ್ತಿದ್ದ ಆರೋಪದ ಮೇರೆಗೆ, ಭದ್ರಾವತಿ (bhadravathi) ನಗರದ ಐವರು ಮಹಿಳೆಯರನ್ನು ದೊಡ್ಡಪೇಟೆ ಠಾಣೆ ಪೊಲೀಸರು (doddapete police station) ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಭದ್ರಾವತಿ ಹೊಸಮನೆಯ (Hosamane) ಹನುಮಂತನಗರ ಬಡಾವಣೆ ನಿವಾಸಿಗಳಾದ ಶಾಂತಿ ಯಾನೆ ಕರ್ಕಿ (31), ಮೀನಾಕ್ಷಿ (38), ಸಾವಿತ್ರಿ ಯಾನೆ ಬಾಬಾ (29), ಸುಶೀಲಮ್ಮ (66) ಹಾಗೂ ಭೋವಿ ಕಾಲೋನಿಯ ನಿವಾಸಿ ದುರ್ಗಾ ಯಾನೆ ಸಣ್ಣ ದುರ್ಗ (29) ಬಂಧಿತ ಆರೋಪಿಗಳೆಂದು (accused) ಗುರುತಿಸಲಾಗಿದೆ.
ಆರೋಪಿಗಳಿಂದ ಒಟ್ಟಾರೆ 7 ಪ್ರಕರಣಕ್ಕೆ ಸಂಬಂಧಿಸಿದಂತೆ 8,13,000 ರೂ. ಮೌಲ್ಯದ 122 ಗ್ರಾಂ ತೂಕದ ಬಂಗಾರದ ಆಭರಣಗಳನ್ನು (Gold jewelry) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ 29-6-2024 ರಂದು ಶಿವಮೊಗ್ಗದ ಜೆಸಿ ನಗರದ ಮಹಿಳೆಯೋರ್ವರು ದಾವಣಗೆರೆಗೆ (davangere) ತೆರಳಲು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ (ksrtc bus stand) ಆಗಮಿಸಿದ್ದರು. ಈ ವೇಳೆ ಅವರ ವ್ಯಾನಿಟಿ ಬ್ಯಾಗ್ (vanity bag) ನಲ್ಲಿದ್ದ ಚಿನ್ನಾಭರಣಗಳನ್ನು ಅಪಹರಿಸಲಾಗಿತ್ತು.
ಸದರಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸದರಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಇತರೆ ಕಳವು (theft) ಕೃತ್ಯಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.
ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ (inspector) ರವಿ ಪಾಟೀಲ್ ನೇತೃತ್ವದಲ್ಲಿ ಎ ಎಸ್ ಐ ನಾಗರಾಜ್, ಫಾಲಾಕ್ಷ ನಾಯ್ಕ್, ಲಚ್ಚನಾಯ್ಕ್, ಸಿಪಿಸಿಗಳಾದ ಚಂದ್ರ ನಾಯ್ಕ್, ಗುರುನಾಯ್ಕ್, ನಿತಿನ್, ಪುನೀತ್ ರಾವ್, ಸಿಬ್ಬಂದಿಗಳಾದ ದೀಪಾ ಎಸ್ ಹುಬ್ಬಳ್ಳಿ, ಪೂಜಾ, ಸುಮಿತ್ರಬಾಯಿ, ಲಕ್ಷ್ಮೀರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.