
ಪಶ್ಚಿಮಘಟ್ಟ ವ್ಯಾಪ್ತಿ ಪ್ರದೇಶಗಳಲ್ಲಿ ಭಾರೀ ಮಳೆ : ಜೋಗ ಜಲಧಾರೆ ವೀಕ್ಷಣೆಗೆ ಜನಸಾಗರ!
ಶಿವಮೊಗ್ಗ (shivamogga), ಜು. 14: ಮಲೆನಾಡು (malnad) ಭಾಗದಲ್ಲಿ ಕಳೆದ ಕೆಲ ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ (monsoon rain), ಕಳೆದೆರೆಡು ದಿನಗಳಿಂದ ಮತ್ತೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ (western ghats area) ಆರ್ಭಟ ಜೋರಾಗಿದೆ. ಇದರಿಂದ ನದಿಗಳ (rivers) ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಪ್ರಮುಖ ಜಲಾಶಯಗಳ (dams) ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ.
ಮತ್ತೊಂದೆಡೆ, ಶರಾವತಿ ಕಣಿವೆ (sharavathi valley) ಪ್ರದೇಶದಲ್ಲಿಯೂ ಧಾರಾಕಾರ ವರ್ಷಧಾರೆಯಾಗುತ್ತಿದೆ (heavy rainfall). ಇದರಿಂದ ವಿಶ್ವವಿಖ್ಯಾತ ಜೋಗ ಜಲಪಾತದ (jogfalls) ಭೋರ್ಗರೆತ ಮುಂದುವರಿದಿದೆ. ಜಲಧಾರೆಯ ವೈಭೋಗ ವೀಕ್ಷಣೆಗೆ ಜನಸಾಗರವೇ ಹರಿದು ಹರಿದುಬರುತ್ತಿದೆ. ಭಾನುವಾರ ಬೀಳುತ್ತಿದ್ದ ಭಾರೀ ಮಳೆಯ ನಡುವೆಯೇ ಜಲ ವೈಭೋಗವನ್ನು ಪ್ರವಾಸಿಗರು (tourists) ಕಣ್ತುಂಬಿಕೊಂಡರು.
‘ವಾರಾಂತ್ಯದ (weekend) ದಿನಗಳಂದು ಜಲಪಾತಕ್ಕೆ (falls) ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಳೆದ ಭಾನುವಾರದಂತೆ, ಪ್ರಸ್ತುತ ಭಾನುವಾರು ಕೂಡ ಸಾವಿರಾರು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸಿದ್ದರು. ಯಾವುದೇ ಗೊಂದಲ – ಗಡಿಬಿಡಿಗೆ ಆಸ್ಪದವಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು’ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ (department of tourism) ಅಧಿಕಾರಿ ಧರ್ಮಪ್ಪ ಅವರು ಮಾಹಿತಿ ನೀಡಿದ್ದಾರೆ.
ಭಾರೀ ಮಳೆ : ಶಿವಮೊಗ್ಗ ಜಿಲ್ಲೆಯ (shimoga district) ಘಟ್ಟ ಪ್ರದೇಶಗಳಲ್ಲಿ ಭಾನುವಾರ ಕೂಡ ವ್ಯಾಪಕ ಮಳೆ ಮುಂದುವರಿದಿರುವ ಮಾಹಿತಿಗಳು ಬಂದಿವೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ (mani) 130 ಮಿಲಿ ಮೀಟರ್, ಯಡೂರು (yadur) 120 ಮಿ.ಮೀ., ಹುಲಿಕಲ್ (hulikallu) 140 ಮಿ.ಮೀ., ಮಾಸ್ತಿಕಟ್ಟೆ (mastikatte) 149 ಮಿ.ಮೀ., ಚಕ್ರಾ (chakra) 112 ಮಿ.ಮೀ., ಸಾವೇಹಕ್ಲುವಿನಲ್ಲಿ (savehaklu) 125 ಮಿ.ಮೀ ವರ್ಷಧಾರೆಯಾಗಿದೆ.
ಉಳಿದಂತೆ ಭದ್ರಾವತಿ (bhadravathi) 8. 4 ಮಿ.ಮೀ., ಹೊಸನಗರ (hosanagara) 69. 4 ಮಿ.ಮೀ., ಸಾಗರ (sagara) 71. 9 ಮಿ.ಮೀ., ಶಿಕಾರಿಪುರ (shikaripura) 14. 2 ಮಿ.ಮೀ., ಶಿವಮೊಗ್ಗ (shimoga) 14. 6 ಮಿ.ಮೀ., ಸೊರಬ (sorab) 23. 3 ಮಿ.ಮೀ. ಹಾಗೂ ತೀರ್ಥಹಳ್ಳಿಯಲ್ಲಿ (thirthalli) 56. 7 ಮಿ.ಮೀ. ವರ್ಷಧಾರೆಯಾಗಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ (linganamakki dam), ಭದ್ರಾ (bhadra dam) ಹಾಗೂ ತುಂಗಾ ಜಲಾಶಯಗಳ (tunga dam) ಒಳಹರಿವಿನಲ್ಲಿ (inflow) ಏರಿಕೆ ಕಂಡುಬಂದಿದೆ.