
ಪತ್ರಕರ್ತ ರವೀಂದ್ರ ಮುದ್ದಿ ವಿರಚಿತ ‘ಸಿಗ್ನಲ್ ಜಂಪ್’ ಪುಸ್ತಕ ಲೋಕಾರ್ಪಣೆ
ಬೆಂಗಳೂರು (bengaluru), ಜು. 14 : ಪತ್ರಕರ್ತ (journalist) ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನ (‘Signal Jump’ story collection) ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು.
ಬೆಂಗಳೂರಿನ (bengaluru) ವಿಜಯನಗರದಲ್ಲಿರುವ ಎಂ ಚಿದಾನಂದಮೂರ್ತಿ ಸಭಾಂಗಣದಲ್ಲಿ ( m chidanandamurthy hall) ಕಾರ್ಯಕ್ರಮ ಆಯೋಜನೆಯಾಗಿತ್ತು. ಖ್ಯಾತ ಬರಹಗಾರ ಜೋಗಿ (writer and journalist jogi) ಅವರು ‘ಸಿಗ್ನಲ್ ಜಂಪ್’ ಕೃತಿ ಲೋಕಾರ್ಪಣೆಗೊಳಿಸಿದರು (book released)
ಸಮಾರಂಭದಲ್ಲಿ (programme) ವೀರಕಪುತ್ರ ಶ್ರೀನಿವಾಸ್, ಹಿರಿಯ ಬರಹಗಾರರಾದ ಯತಿರಾಜ್ ವೀರಾಂಬುಧಿ, ಪೂರ್ಣಿಮಾ ಮಾಳಗಿಮನಿ, ಮಹೇಶ್ ಅರಬಳ್ಳಿ, ಕಥೆಗಾರ ಶಿವಾಗ್ ಹಾಗೂ ಅವ್ವ ಪುಸ್ತಕಾಲಯದ ಮುಖ್ಯ ರೂವಾರಿ ಅನಂತ್ ಕುಣಿಗಲ್ ಉಪಸ್ಥಿತರಿದ್ದರು.
‘ಸಿಗ್ನಲ್ ಜಂಪ್’ ಪುಸ್ತಕವನ್ನು ಅವ್ವ ಪುಸ್ತಕಾಲಯದಿಂದ ಪ್ರಕಟಣೆ ಮಾಡಲಾಗಿದೆ. ಕರ್ನಾಟಕದ (karnataka) ಪ್ರಮುಖ ಪುಸ್ತಕ ಅಂಗಡಿಗಳಲ್ಲಿ (book store) ಪುಸ್ತಕ ಲಭ್ಯವಿದೆ ಎಂದು ಅವ್ವ ಪುಸ್ತಕಾಲಯದ ಅನಂತ್ ಕುಣಿಗಲ್ ಹೇಳಿದ್ದಾರೆ.