
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ!
ಶಿವಮೊಗ್ಗ (shivamogga), ಜು. 14: ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ (shimoga district) ದುರ್ಬಲಗೊಂಡಿದ್ದ ಮುಂಗಾರು ಮಳೆ (monsoon rain), ಮತ್ತೆ ಚುರುಕುಗೊಂಡಿದೆ. ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ನಡುವೆ ಸೋಮವಾರ ಕೂಡ ಜಿಲ್ಲೆಯಾದ್ಯಂತ ಭಾರೀ ವರ್ಷಧಾರೆಯಾಗುತ್ತಿದೆ (heavy rainfall). ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಎಡೆಬಿಡದೆ ವರ್ಷಧಾರೆಯಾಗುತ್ತಿದೆ.
ಈಗಾಗಲೇ ಹವಾಮಾನ ಇಲಾಖೆಯು (meteorological department) ಜು. 15 ಮತ್ತು ಜು. 16 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್ (red alert forecast) ಘೋಷಣೆ ಮಾಡಿತ್ತು. ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಹಲವೆಡೆ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ.
ಘಟ್ಟ ಪ್ರದೇಶಗಳಲ್ಲಿ (western ghats) ವರುಣನ ಅಬ್ಬರ ಜೋರಾಗಿದೆ. ಕೆರೆಕಟ್ಟೆ, ನದಿಗಳ (rivers) ನೀರಿನ ಸಂಗ್ರಹದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಕಂಡುಬರಲಾರಂಭಿಸಿದೆ. ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಘಟ್ಟ ಪ್ರದೇಶಗಳಾದ ಮಾಣಿಯಲ್ಲಿ (mani) 102 ಮಿಲಿ ಮೀಟರ್, ಯಡೂರು (yadur) 94 ಮಿ.ಮೀ., ಹುಲಿಕಲ್ಲು (hulikal) 132 ಮಿ.ಮೀ., ಮಾಸ್ತಿಕಟ್ಟೆ (masthikatte) 135 ಮಿ.ಮೀ., ಚಕ್ರಾ (chakra) 140 ಮಿ.ಮೀ ಹಾಗೂ ಸಾವೇಹಕ್ಲುವಿನಲ್ಲಿ (savehaklu) 125 ಮಿ.ಮೀ. ವರ್ಷಧಾರೆಯಾಗಿದೆ.
ಉಳಿದಂತೆ ಶಿವಮೊಗ್ಗದಲ್ಲಿ (shivamogga) 20 ಮಿ.ಮೀ., ಭದ್ರಾವತಿ (bhadravathi)12. 90 ಮಿ.ಮೀ., ತೀರ್ಥಹಳ್ಳಿ (thirthalli) 56. 20 ಮಿ.ಮೀ., ಸಾಗರ (sagar) 71. 90 ಮಿ.ಮೀ., ಶಿಕಾರಿಪುರ (shikaripura) 24. 90 ಮಿ.ಮೀ., ಸೊರಬ (sorab) 33 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagara) 57. 20 ಮಿ.ಮೀ. ವರ್ಷಧಾರೆಯಾಗಿದೆ.