Shimoga: Separate theft case - arrest of three women! ಶಿವಮೊಗ್ಗ : ಪ್ರತ್ಯೇಕ ಕಳ್ಳತನ ಪ್ರಕರಣ – ಮೂವರು ಮಹಿಳೆಯರ ಬಂಧನ!

ಶಿವಮೊಗ್ಗ : ಪ್ರತ್ಯೇಕ ಕಳ್ಳತನ ಪ್ರಕರಣ – ಮೂವರು ಮಹಿಳೆಯರ ಬಂಧನ!

ಶಿವಮೊಗ್ಗ (shivamogga), ಜು. 15: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ (doddapete police station) ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಳವು ಪ್ರಕರಣಗಳಿಗೆ (individual theft cases) ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು (womens) ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬಸ್ ನಿಲ್ದಾಣದಲ್ಲಿ ಕಳವು : ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ (shimoga ksrtc bus stand) ಪ್ರಯಾಣಿಕರಿಂದ ಚಿನ್ನಾಭರಣ (jewels) ಕಳವು ಮಾಡಿದ್ದ ಆರೋಪದ ಮೇರೆಗೆ ಮಂಜುನಾಥ ಬಡಾವಣೆ ನಿವಾಸಿ ತಾಹಿರಾ ರೋಹಿ (32) ಎಂಬ ಮಹಿಳೆಯನ್ನು ಬಂಧಿಸಲಾಗಿದೆ.

29-6-2024 ರಂದು ಭದ್ರಾವತಿ (bhadravathi) ಕೂಡ್ಲಿಗೆರೆ ಗ್ರಾಮದ ಮಹಿಳೆಯೋರ್ವರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ (ksrtc bus stand) ಆಗಮಿಸಿದ್ದರು. ಈ ವೇಳೆ ಅವರ ವ್ಯಾನಿಟಿ ಬ್ಯಾಗ್ (vanity bag) ನಲ್ಲಿದ್ದ ಬಂಗಾರದ ನಕ್ಲೆಸ್ (nekles) ಕಳುವಾಗಿದ್ದು ಕಂಡುಬಂದಿತ್ತು. ಈ ಸಂಬಂಧ ಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸದರಿ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ತಾಹಿರಾ ರೋಹಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆಪಾದಿತೆಯು ಬಸ್ ನಿಲ್ದಾಣದಲ್ಲಿ ಎರಡು ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಗಿತ್ತು. ಆಪಾದಿತೆಯಿಂದ 5.45 ಲಕ್ಷ ರೂ. ಮೌಲ್ಯದ 81 ಗ್ರಾಂ 800 ಮಿಲಿ ಗ್ರಾಂ ತೂಕದ ಬಂಗಾರದ ಆಭರಣಗಳನ್ನು (gold jewelry) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಂಗಡಿಯಲ್ಲಿ ಕಳವು : ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗದ ಬಿ.ಹೆಚ್.ರಸ್ತೆಯ (b h road) ಭೀಮಾ ಗೋಲ್ಡ್ ಅಂಗಡಿಯಲ್ಲಿ (bhima gold jewelry shop) 25-5-2024 ರಂದು ಗ್ರಾಹಕರ ಸೋಗಿನಲ್ಲಿ (In customer guise) ಆಗಮಿಸಿ, 3 ಬಂಗಾರದ ಲಾಕೆಟ್ ಕಳವು ಮಾಡಿರುವ ಕುರಿತಂತೆ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಿವಮೊಗ್ಗದ ಜಿ.ಎಸ್.ಕೆ.ಎಂ ರಸ್ತೆ ಪಂಚವಟಿ ಕಾಲೋನಿಯ ನಿವಾಸಿಯಾದ ಸರೋಜ ಕೆ (49) ಹಾಗೂ ಯುವತಿ ತನ್ವಿ ಎಂ ಎಸ್ (22) ಎಂಬುವರನ್ನು ಬಂಧಿಸಿದ್ದಾರೆ ಇವರಿಂದ 27 ಸಾವಿರ ರೂ. ಮೌಲ್ಯದ 3 ಗ್ರಾಂ 470 ಮಿಲಿ ತೂಕದ 3 ಬಂಗಾರದ ಲಾಕೆಟ್ ಗಳನ್ನು (gold locket) ಪೊಲೀಸರು (police) ವಶಕ್ಕೆ ಪಡೆದುಕೊಂಡಿದ್ದಾರೆ.

ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ (inspector) ರವಿ ಪಾಟೀಲ್ ನೇತೃತ್ವದಲ್ಲಿ ಎ ಎಸ್ ಐ ನಾಗರಾಜ್, ಫಾಲಾಕ್ಷ ನಾಯ್ಕ್, ಲಚ್ಚನಾಯ್ಕ್, ಸಿಪಿಸಿಗಳಾದ ಚಂದ್ರ ನಾಯ್ಕ್, ಗುರುನಾಯ್ಕ್, ನಿತಿನ್, ಪುನೀತ್ ರಾವ್, ಸಿಬ್ಬಂದಿಗಳಾದ ದೀಪಾ ಎಸ್ ಹುಬ್ಬಳ್ಳಿ, ಪೂಜಾ, ಸುಮಿತ್ರಬಾಯಿ, ಲಕ್ಷ್ಮೀರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Heavy rain across Shimoga district! ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ! monsoonrain malnad rain alert red alert shimogarain karnataka rain western ghats ರೆಡ್ ಅಲರ್ಟ್ ಮುಂಗಾರು ಮಳೆ munagru male Previous post ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ!
Shimoga: Farmers protest against Aadhaar link for agricultural electricity pump sets ಶಿವಮೊಗ್ಗ : ಕೃಷಿ ವಿದ್ಯುತ್ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ವಿರೋಧಿಸಿ ರೈತರ ಪ್ರತಿಭಟನೆ Next post ಕೃಷಿ ವಿದ್ಯುತ್ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ವಿರೋಧಿಸಿ ಪ್ರತಿಭಟನೆ