
ಕೃಷಿ ವಿದ್ಯುತ್ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ವಿರೋಧಿಸಿ ಪ್ರತಿಭಟನೆ
ಶಿವಮೊಗ್ಗ (shivamogga), ಜು. 14: ಕೃಷಿ ವಿದ್ಯುತ್ ಪಂಪ್ ಸೆಟ್ ಗಳ ಆರ್.ಆರ್. ಸಂಖ್ಯೆಯೊಂದಿಗೆ ರೈತರ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ (aadhaar card number link) ಮಾಡುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಸೋಮವಾರ ಶಿವಮೊಗ್ಗ ತಾಲೂಕಿನ (shimoga taluk) ಹೊಳಲೂರು (holaluru) ಗ್ರಾಮದ ಮೆಸ್ಕಾಂ ಕಚೇರಿ (mescom office) ಎದುರು ಸುತ್ತಮುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆ (protest) ನಡೆಸಿದರು.
ಕೃಷಿ ವಿದ್ಯುತ್ ಪಂಪ್’ಸೆಟ್ ಗಳಿಗೆ ((agricultural electric pump sets) ಆಧಾರ್ ಜೋಡಣೆ ಮಾಡುವಂತೆ ಹೊರಡಿಸಿರುವ ಆದೇಶ ಸರಿಯಲ್ಲ. ಇದು ರೈತ (farmers) ಸಮುದಾಯಕ್ಕೆ ಮಾರಕವಾಗಿ ಪರಿಣಮಿಸಲಿದೆ. ಹಲವು ರೀತಿಯ ಗೊಂದಲಗಳಿಗೆ ಎಡೆ ಮಾಡಿಕೊಡಲಿದೆ ಎಂದು ಪ್ರತಿಭಟನಾಕಾರರು (protesters) ಆರೋಪಿಸಿದ್ದಾರೆ.
ಕೃಷಿ ಚಟುವಟಿಕೆಗೆ (agricultural activity) ಉತ್ತೇಜನ ನೀಡಲು ಸರ್ಕಾರಗಳು ರೈತರಿಗೆ ಸೂಕ್ತ ಪ್ರೋತ್ಸಾಹ, ನೆರವು, ಸಹಕಾರ ನೀಡಬೇಕು. ಆದರೆ ಕೃಷಿ ವಿದ್ಯುತ್ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ (aadhar link) ಮಾಡುವಂತಹ ಕ್ರಮಗಳು ರೈತ ವಿರೋಧಿ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಅತೀವೃಷ್ಟಿ – ಅನಾವೃಷ್ಟಿ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದ ರೈತರು ಬೆಳೆ (crops) ಉಳಿಸಿಕೊಳ್ಳಲು ಪರದಾಡುವಂತಹ ದುಃಸ್ಥಿತಿಯಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಕೃಷಿ ಚಟುವಟಿಕೆಯಲ್ಲಿ ರೈತ ಸಮುದಾಯ ತೊಡಗಿಸಿಕೊಂಡಿದೆ ಎಂಬುವುದನ್ನು ಆಡಳಿತಗಾರರು ಮರೆಯಬಾರದು.
ತಕ್ಷಣವೇ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವ ಆದೇಶವನ್ನು (order) ವಾಪಾಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ತೀವ್ರ ಸ್ವರೂಪದ ಪ್ರತಿಭಟನೆ (protest) ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.