continued heavy rain in shimoga district: Increase in inflow of linganamakki tunga bhadra dams! ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ : ಲಿಂಗನಮಕ್ಕಿ ತುಂಗಾ ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ!

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ : ಲಿಂಗನಮಕ್ಕಿ ತುಂಗಾ ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ!

ಶಿವಮೊಗ್ಗ (shivamogga), ಜು. 16: ಶಿವಮೊಗ್ಗ ಜಿಲ್ಲೆಯ (shimoga district) ವಿವಿಧೆಡೆ ಭಾರೀ ಮಳೆ (heavy rainfall) ಮುಂದುವರಿದಿದೆ. ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಲ್ಲಿ ಆರ್ಭಟ ಜೋರಾಗಿದೆ. ಇದರಿಂದ ಹಳ್ಳಕೊಳ್ಳ, ಕೆರೆಕಟ್ಟೆ, ನದಿಗಳು ಮೈದುಂಬಿ ಹರಿಯುತ್ತಿವೆ. ಕೆಲವೆಡೆ ಪ್ರವಾಹ ಭೀತಿ (flood threat) ಕೂಡ ಎದುರಾಗಿದೆ.  

ಜಲಾನಯನ ಪ್ರದೇಶದಲ್ಲಿ (catchment areas) ಧಾರಾಕಾರ ವರ್ಷಧಾರೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯಗಳ (dams) ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ (hydroelectric generating station) ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವು 77,911 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. ಡ್ಯಾಂನ ನೀರಿನ ಮಟ್ಟ 1782. 15 (ಗರಿಷ್ಠ ಮಟ್ಟ : 1819) ಅಡಿ ಇದೆ. ಕಳೆದ 24 ಗಂಟೆಯಲ್ಲಿ 4 ಅಡಿ (feet) ನೀರು ಸಂಗ್ರಹವಾಗಿದೆ.

ಮಧ್ಯ ಕರ್ನಾಟಕದ (central karnataka) ಪ್ರಮುಖ ಜಲಾಶಯ ಭದ್ರಾ (bhadra dam) ಒಳಹರಿವಿನಲ್ಲಿಯೂ ಗಣನೀಯ ಏರಿಕೆಯಾಗಿದ್ದು, 27,839 ಕ್ಯೂಸೆಕ್ ನೀರು ಹರಿದು ಬರುತ್ತಿದೆ (inflow). 166 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (out flow). ಡ್ಯಾಂನ ನೀರಿನ ಮಟ್ಟ (water level) 144 ಅಡಿ 7 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ ಸರಿಸುಮಾರು ಮೂರುವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ (last year) ಇದೇ ದಿನದಂದು ಭದ್ರಾ ಡ್ಯಾಂನಲ್ಲಿ 141. 3 ಅಡಿಯಷ್ಟು ನೀರು ಸಂಗ್ರಹವಾಗಿತ್ತು.

ಉಳಿದಂತೆ ತುಂಗಾ ಜಲಾಶಯವು (tunga dam) ಈಗಾಗಲೇ ಗರಿಷ್ಠ ಮಟ್ಟವಾದ 588. 24 ಮೀಟರ್ ತಲುಪಿದೆ. ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂಗೆ 42,683 ಕ್ಯೂಸೆಕ್ ಒಳಹರಿವಿದೆ (inflow). 41,583 ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ (hosapete tungabhadra dam) ಹೊರಬಿಡಲಾಗುತ್ತಿದೆ.

Heavy rain : Holiday announcement for all schools and colleges in Shimoga district on 16th! ಭಾರೀ ಮಳೆ : ಜು. 16 ರ ಮಂಗಳವಾರ ಶಿವಮೊಗ್ಗ ಜಿಲ್ಲೆಯ ಎಲ್ಲ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ! Previous post ಭಾರೀ ಮಳೆ : ಜು. 16 ರಂದು ಶಿವಮೊಗ್ಗ ಜಿಲ್ಲೆಯ ಎಲ್ಲ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ!
tunga river has reached the danger level in shimoga : heavy to heavy rainfall in Western Ghats! ಶಿವಮೊಗ್ಗದಲ್ಲಿ ಅಪಾಯದ ಮಟ್ಟ ತಲುಪಿದ ತುಂಗಾ ನದಿ : ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವರ್ಷಧಾರೆಯ ಅಬ್ಬರ! Next post ಶಿವಮೊಗ್ಗದಲ್ಲಿ ಅಪಾಯದ ಮಟ್ಟ ತಲುಪಿದ ತುಂಗಾ ನದಿ : ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವರ್ಷಧಾರೆಯ ಅಬ್ಬರ!