tunga river has reached the danger level in shimoga : heavy to heavy rainfall in Western Ghats! ಶಿವಮೊಗ್ಗದಲ್ಲಿ ಅಪಾಯದ ಮಟ್ಟ ತಲುಪಿದ ತುಂಗಾ ನದಿ : ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವರ್ಷಧಾರೆಯ ಅಬ್ಬರ!

ಶಿವಮೊಗ್ಗದಲ್ಲಿ ಅಪಾಯದ ಮಟ್ಟ ತಲುಪಿದ ತುಂಗಾ ನದಿ : ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವರ್ಷಧಾರೆಯ ಅಬ್ಬರ!

ಶಿವಮೊಗ್ಗ (shivamogga), ಜು. 16: ಶಿವಮೊಗ್ಗ ನಗರದಲ್ಲಿ (shimoga city) ಸೋಮವಾರ ರಾತ್ರಿಯಿಡಿ ಭಾರೀ ಮಳೆಯಾಯಿತು (heavy rainfall). ಮಂಗಳವಾರ ಬೆಳಿಗ್ಗೆಯಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಮತ್ತೊಂದೆಡೆ, ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು (tunga river) ಮತ್ತೆ ಮೈದುಂಬಿದೆ. ಜೊತೆಗೆ ಅಪಾಯದ ಮಟ್ಟದಲ್ಲಿ (danger level) ಹರಿಯುತ್ತಿದೆ.

ಆಗುಂಬೆ (agumbe), ತೀರ್ಥಹಳ್ಳಿ (thirthalli) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ (rain). ಇದರಿಂದ ತುಂಗಾ ಡ್ಯಾಂಗೆ (tunga dam) ಹರಿದುಬರುತ್ತಿರುವ ನೀರಿನ (water inflow) ಪ್ರಮಾಣದಲ್ಲಿ ನಿರಂತರವಾಗಿ ಏರಿಕೆ (increasing) ಕಂಡುಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ (maximum level) ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಡ್ಯಾಂನಿಂದ ಹೊರಬಿಡುವ (out flow)ನೀರಿನ ಪ್ರಮಾಣ ಹೆಚ್ಚಾದಂತೆ, ಶಿವಮೊಗ್ಗದಲ್ಲಿ ತುಂಗಾ ನದಿಯ (shimoga tunga river) ಹರಿವು ಕೂಡ ಹೆಚ್ಚಾಗುತ್ತದೆ. ಮಂಗಳವಾರ ಬೆಳಿಗ್ಗೆ ಅಪಾಯದ ಮಟ್ಟ ಸೂಚಿಸುವ ನಗರದ ಕೋರ್ಪಳಯ್ಯನ ಛತ್ರದ ಬಳಿ ನದಿಯಲ್ಲಿರುವ ಮಂಟಪ ಮುಳುಗಿತ್ತು. ಮಂಟಪದ ಮೇಲೆ ನೀರು ಹರಿಯುತ್ತಿದ್ದುದು ಕಂಡುಬಂದಿತು.

ಮತ್ತೊಂದೆಡೆ, ತುಂಗೆಯ ಹರಿವು ಹೆಚ್ಚಾಗಿರುವುದರಿಂದ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ (low-lying areas) ಜಲಾವೃತದ (waterlogging) ಭೀತಿ ಎದುರಾಗಿದೆ. ಈಗಾಗಲೇ ಪಾಲಿಕೆ (corporation) ಆಡಳಿತವು ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆಡಳಿತ ಮಾಡಿಕೊಂಡಿದೆ.

ಮಳೆ ವಿವರ : ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ (western ghats areas) ಮಳೆಯ ಆರ್ಭಟ ಜೋರಾಗಿದ್ದು, ಅಕ್ಷರಶಃ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಣಿಯಲ್ಲಿ (mani) 240 ಮಿಲಿ ಮೀಟರ್ (ಮಿ.ಮೀ.), ಯಡೂರು (yadur) 229 ಮಿ.ಮೀ., ಹುಲಿಕಲ್ಲು (hulikallu) 245 ಮಿ.ಮೀ., ಮಾಸ್ತಿಕಟ್ಟೆ (masthikatte) 247 ಮಿ.ಮೀ., ಸಾವೇಹಕ್ಲುವಿನಲ್ಲಿ (savehakklu) 210 ಮಿ.ಮೀ. ಮಳೆಯಾಗಿದೆ.

ಶಿವಮೊಗ್ಗ (shimoga) 52 ಮಿ.ಮೀ., ಭದ್ರಾವತಿ (bhadravathi) 26. 40 ಮಿ.ಮೀ., ತೀರ್ಥಹಳ್ಳಿ (thirthalli) 120. 90 ಮಿ.ಮೀ., ಸಾಗರ (sagara) 129. 10 ಮಿ.ಮೀ., ಶಿಕಾರಿಪುರ (shikaripura) 57. 90 ಮಿ.ಮೀ., ಸೊರಬ (soraba) 58. 50 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagara) 133. 60 ಮಿ.ಮೀ. ಮಳೆಯಾಗಿದೆ.  

continued heavy rain in shimoga district: Increase in inflow of linganamakki tunga bhadra dams! ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ : ಲಿಂಗನಮಕ್ಕಿ ತುಂಗಾ ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ! Previous post ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ : ಲಿಂಗನಮಕ್ಕಿ ತುಂಗಾ ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ!
Shimoga – Bhadravati gambling stalls raided by police : 14 people arrested! ಶಿವಮೊಗ್ಗ – ಭದ್ರಾವತಿ ಇಸ್ಪೀಟ್ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ : 14 ಜನ ವಶಕ್ಕೆ! Next post ಶಿವಮೊಗ್ಗ – ಭದ್ರಾವತಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ : 14 ಜನ ವಶಕ್ಕೆ!