
ಶಿವಮೊಗ್ಗ – ಭದ್ರಾವತಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ : 14 ಜನ ವಶಕ್ಕೆ!
ಶಿವಮೊಗ್ಗ (shivamogga), ಜು. 16: ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ, ಎರಡು ಇಸ್ಪೀಟ್ ಜೂಜು ಅಡ್ಡೆಗಳ (gambling) ಮೇಲೆ ಪೊಲೀಸರು ದಾಳಿ (police raid) ನಡೆಸಿದ್ದಾರೆ. ಈ ವೇಳೆ 14 ಜನರನ್ನು ಬಂಧಿಸಿ (arrested), ಸಾವಿರಾರು ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ವರದಿ : ಗ್ರಾಮಾಂತರ ಪೊಲೀಸ್ ಠಾಣೆ (shimoga rural police station) ವ್ಯಾಪ್ತಿಯ ಹೊನ್ನವಿಲೆ ಗ್ರಾಮದಲ್ಲಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದವರ ಮೇಲೆ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಜೂಜಾಟದಲ್ಲಿ (gambling) ತೊಡಗಿದ್ದ 6 ಜನರನ್ನು ಬಂಧಿಸಿದ್ದಾರೆ. 11,250 ರೂ. ವಶಕ್ಕೆ ಪಡೆದಿದ್ದಾರೆ. ಇನ್ಸ್’ಪೆಕ್ಟರ್ (Inspector) ಸತ್ಯನಾರಾಯಣ, ಸಬ್ ಇನ್ಸ್’ಪೆಕ್ಟರ್ (sub inspector) ವಗ್ಗಣ್ಣನವರ್ ಮತ್ತವರ ಸಿಬ್ಬಂದಿಗಳು ಸದರಿ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ವರದಿ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಕಿ ತಾಂಡಾದಲ್ಲಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜೂಜಿಗೆ ಬಳಸಿದ್ದ 6,600 ನಗದು ಹಾಗೂ ಇಸ್ಪೀಟ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ಸ್’ಪೆಕ್ಟರ್ (Inspector) ಜಗದೀಶ್ ಹಂಚಿನಾಳ್, ಸಬ್ ಇನ್ಸ್’ಪೆಕ್ಟರ್ ಶಿಲ್ಪಾ (sub inspector) ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.