shimoga – davanagere district farmers' lifeline bhadra dam water inflow huge increase! shimoga – davanagere district farmers' lifeline bhadra dam water inflow huge increase! ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಡ್ಯಾಂ ಒಳಹರಿವಿನಲ್ಲಿ ಭಾರೀ ಹೆಚ್ಚಳ!

ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಡ್ಯಾಂ ಒಳಹರಿವಿನಲ್ಲಿ ಭಾರೀ ಹೆಚ್ಚಳ!

ಶಿವಮೊಗ್ಗ, ಜು. 17: ಮಧ್ಯ ಕರ್ನಾಟಕದ (central karnataka) ಪ್ರಮುಖ ಜಲಾಶಯವಾದ ಭದ್ರಾ (bhadra dam) ನೀರಿನ ಸಂಗ್ರಹದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರಲಾರಂಭಿಸಿದೆ. ಜಲಾನಯನ ಪ್ರದೇಶ (catchment area) ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ (heavy rainfall) ಡ್ಯಾಂ ಒಳಹರಿವಿನಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ ಮೂರುವರೆ ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.

ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು (inflow) 34,544 ಕ್ಯೂಸೆಕ್ ಗೆ ಏರಿಕೆಯಾಗಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಕಂಡುಬಂದ ಅತ್ಯಧಿಕ (highest) ಒಳಹರಿವು ಇದಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ 3 ಅಡಿ 9 ಇಂಚು ನೀರು ಸಂಗ್ರಹವಾಗಿದೆ.

ಪ್ರಸ್ತುತ ಡ್ಯಾಂ ನೀರಿನ ಮಟ್ಟ (dam water level) 148 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. 169 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (out flow). ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 141. 4 ಅಡಿ ನೀರು ಸಂಗ್ರಹವಾಗಿತ್ತು.

ಡ್ಯಾಂ ಜಲಾನಯನ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ (chikkamagaluru) ಭಾರೀ ಪ್ರಮಾಣದ ವರ್ಷಧಾರೆಯಾಗುತ್ತಿದೆ (heavy to heavy rainfall). ಇದರಿಂದ ಭದ್ರಾ ಡ್ಯಾಂ ಒಳಹರಿವಿನಲ್ಲಿ (bhadra dam inflow) ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.

ಮುಂದಿನ ಕೆಲ ದಿನಗಳವರೆಗೆ ಇದೇ ರೀತಿ ಒಳಹರಿವು ಕಂಡುಬಂದರೆ, ಪ್ರಸ್ತುತ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಡ್ಯಾಂ ಭರ್ತಿಯಾಗಲಿದೆ (maximum level) ಎಂದು ಡ್ಯಾಂ ವ್ಯಾಪ್ತಿಯ ಎಂಜಿನಿಯರ್ ಗಳು ಅಭಿಪ್ರಾಯಪಡುತ್ತಾರೆ.

Selling ganja in Bhadravati: One arrested! ಭದ್ರಾವತಿಯಲ್ಲಿ ಗಾಂಜಾ ಮಾರಾಟ : ಓರ್ವನ ಬಂಧನ! Previous post ಭದ್ರಾವತಿಯಲ್ಲಿ ಗಾಂಜಾ ಮಾರಾಟ : ಓರ್ವನ ಬಂಧನ!
Heavy rain is likely to continue : red alert forecast for Shimoga district again! ಭಾರೀ ಮಳೆ ಮುಂದುವರಿಕೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್ ಅಲರ್ಟ್ ಮುನ್ಸೂಚನೆ! Next post ಭಾರೀ ಮಳೆ ಮುಂದುವರಿಕೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್ ಅಲರ್ಟ್ ಮುನ್ಸೂಚನೆ!