
ಭಾರೀ ಮಳೆ ಮುಂದುವರಿಕೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್ ಅಲರ್ಟ್ ಮುನ್ಸೂಚನೆ!
ಶಿವಮೊಗ್ಗ (shivamogga), ಜು. 17: ಕಳೆದ ಕೆಲ ದಿನಗಳಿಂದ ಮಲೆನಾಡಿನಾದ್ಯಂತ (malnad) ವ್ಯಾಪಕ ಮಳೆಯಾಗುತ್ತಿದೆ. ಮತ್ತೊಂದೆಡೆ, ಹವಾಮಾನ ಇಲಾಖೆಯು (meteorological department) ಇನ್ನೂ ಕೆಲ ದಿನಗಳವರೆಗೆ ಮಳೆ ಮುಂದುವರಿಕೆ ಮುನ್ಸೂಚನೆ ನೀಡಿದೆ. ಜು. 17 ಮತ್ತು ಜು. 18 ರಂದು ಭಾರೀ ವರ್ಷಧಾರೆಯಾಗುವ (heavy to heavy rainfall) ಸಾಧ್ಯತೆಯಿದೆ ಎಂದು ತಿಳಿಸಿದ್ದು, ಮತ್ತೇ ರೆಡ್ ಅಲರ್ಟ್ (red alert) ಘೋಷಣೆ ಮಾಡಿದೆ.
ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ತೀರ್ಥಹಳ್ಳಿ (thirthalli), ಸಾಗರ (sagara), ಹೊಸನಗರ (hosanagara) ತಾಲೂಕುಗಳು ಅಕ್ಷರಶಃ ತೊಯ್ದು ತೊಪ್ಪೆಯಾಗಿವೆ. ನದಿಗಳು (rivers) ಮೈದುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಸೃಷ್ಟಿಸುವ ಸಾಧ್ಯತೆಗಳು ಎದುರಾಗಿವೆ. ತುಂಗಾ, ಶರಾವತಿ, ವರದಾ, ಮಾಲತಿ, ದಂಡಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ತಗ್ಗು ಪ್ರದೇಶಗಳಿಗೆ (low lying areas) ನೀರು ನುಗ್ಗುವ ಆತಂಕ ಸೃಷ್ಟಿಸಿವೆ.
ಕುಮದ್ವತಿ ನದಿ ನೀರು ಹೆಚ್ಚಳವಾಗಿರುವುದರಿಂದ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (anjanapura reservoir) ಭರ್ತಿಯಾಗಿದೆ. ಸಾಗರದ ಕೊಲ್ಲಿಬಚ್ಚಲು ಆಣೆಕಟ್ಟು (kollibachalu dam) ಗರಿಷ್ಠ ಮಟ್ಟ ತಲುಪಿದೆ. ಲಿಂಗನಮಕ್ಕಿ (linganamakki dam), ತುಂಗಾ (tunga dam) ಹಾಗೂ ಭದ್ರಾ ಡ್ಯಾಂಗಳಿಗೆ (bhadra dam) ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.
ಮಳೆ ವಿವರ : ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ (rainfall) ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿ (mani) 172 ಮಿಲಿ ಮೀಟರ್, ಯಡೂರು (yadur) 145 ಮಿ.ಮೀ., ಮಾಸ್ತಿಕಟ್ಟೆ (masthikatte) 170 ಮಿ.ಮೀ., ಚಕ್ರಾ (chakra) 113 ಮಿ.ಮೀ., ಸಾವೇಹಕ್ಲು (savehaklu) 140 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ (shimoga) 18. 40 ಮಿ.ಮೀ., ಭದ್ರಾವತಿ (bhadravathi) 16. 60 ಮಿ.ಮೀ., ತೀರ್ಥಹಳ್ಳಿ (thirthalli) 81 ಮಿ.ಮೀ., ಸಾಗರ (sagara) 64. 20 ಮಿ.ಮೀ., ಶಿಕಾರಿಪುರ (shikaripura)16. 80 ಮಿ.ಮೀ., ಸೊರಬ (soraba) 28. 30 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagara) 66. 70 ಮಿ.ಮೀ. ಮಳೆಯಾಗಿದೆ.