70000 cusecs of water released from tunga dam : flood threat continues in shimoga city! ತುಂಗಾ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗ ನಗರದಲ್ಲಿ ಮುಂದುವರಿದ ಪ್ರವಾಹ ಭೀತಿ!

ತುಂಗಾ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗ ನಗರದಲ್ಲಿ ಮುಂದುವರಿದ ಪ್ರವಾಹ ಭೀತಿ!

ಶಿವಮೊಗ್ಗ (shivamogga), ಜು. 17: ತೀರ್ಥಹಳ್ಳಿ, ಶೃಂಗೇರಿ, ಆಗುಂಬೆ ಸುತ್ತಮುತ್ತ ಭಾರೀ ವರ್ಷಧಾರೆಯಾಗುತ್ತಿದೆ. ತುಂಗಾ ನದಿ (tunga river) ಉಕ್ಕಿ ಹರಿಯುತ್ತಿದೆ. ಇದರಿಂದ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ (tunga dam) ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಡ್ಯಾಂನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣವೂ ಕೂಡ ಹೆಚ್ಚಾಗಿದೆ.

ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು (inflow) 64,247 ಕ್ಯೂಸೆಕ್ ಒಳಹರಿವಿದ್ದು ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ 70,497 ಕ್ಯೂಸೆಕ್ (cusec) ನೀರನ್ನು ಹೊರ ಬಿಡಲಾಗುತ್ತಿದೆ (outflow). ಜಲಾನಯನ ಪ್ರದೇಶ (catchment areas) ವ್ಯಾಪ್ತಿಯಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿರುವುದರಿಂದ (heavy rainfall) ಒಳಹರಿವಿನಲ್ಲಿ ನಿರಂತರ ಹೆಚ್ಚಳ ಕಂಡುಬರಲಾರಂಭಿಸಿದೆ.

ತುಂಗಾ ಜಲಾಶಯದಿಂದ (tungadam) 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ, ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು (tunga river in shivamogga) ಅಪಾಯದ ಮಟ್ಟದಲ್ಲಿ (danger level) ಹರಿಯುತ್ತಿದೆ. ನದಿಯಂಚಿನ ತಗ್ಗು ಪ್ರದೇಶಗಳಿಗೆ (low lying areas) ನೀರು ನುಗ್ಗುವ ಭೀತಿ ಎದುರಾಗಿದೆ. ಅಪಾಯದ ಮಟ್ಟ ತೋರ್ಪಡಿಸುವ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪವು ಮುಳುಗಿದೆ. ಇದರ ಮೇಲೆ ಸುಮಾರು 3 ಅಡಿಯಷ್ಟು ನೀರು ಹರಿಯುತ್ತಿದೆ.

ಡ್ಯಾಂನಿಂದ ಬಿಡುತ್ತಿರುವ ನೀರಿನ ಪ್ರಮಾಣ 80 ಸಾವಿರ ಕ್ಯೂಸೆಕ್ ಮೇಲ್ಪಟ್ಟರೆ ನಗರದ ನದಿಪಾತ್ರದ ತಗ್ಗು ಪ್ರದೇಶಗಳಲ್ಲಿನ ಜನವಸತಿ ಪ್ರದೇಶಗಳು (residential areas) ಜಲಾವೃತವಾಗುವ (flooded) ಆತಂಕವಿದೆ. ಈಗಾಗಲೇ ಮಹಾನಗರ ಪಾಲಿಕೆ (corporation) ಆಡಳಿತವು ಜಲಾವೃತ ಸಾಧ್ಯತೆಯಿರುವ ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

filling of shikaripura anjanapura reservoir: yeddyurappa's sons offer bagin ಶಿಕಾರಿಪುರ ಅಂಜನಾಪುರ ಡ್ಯಾಂ ಭರ್ತಿ : ಯಡಿಯೂರಪ್ಪ ಪುತ್ರರಿಂದ ಬಾಗಿನ ಅರ್ಪಣೆ Previous post ಶಿಕಾರಿಪುರ ಅಂಜನಾಪುರ ಜಲಾಶಯ ಭರ್ತಿ : ಯಡಿಯೂರಪ್ಪ ಪುತ್ರರಿಂದ ಬಾಗಿನ ಅರ್ಪಣೆ
continued heavy rain : holiday announcement for schools and colleges of Hosnagar taluk on june 18th! ಮುಂದುವರಿದ ಭಾರೀ ಮಳೆ : ಜು. 18 ರಂದು ಹೊಸನಗರ ತಾಲೂಕಿನ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ! Next post ಮುಂದುವರಿದ ಭಾರೀ ಮಳೆ : ಜು. 18 ರಂದು ಹೊಸನಗರ ತಾಲೂಕಿನ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ!