
ಮುಂದುವರಿದ ಭಾರೀ ಮಳೆ : ಜು. 19 ರ ಶುಕ್ರವಾರ ಕೂಡ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ!
ಶಿವಮೊಗ್ಗ (shivamogga), ಜು. 18 : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ (rain) ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, ಜು. 19 ರ ಶುಕ್ರವಾರ ಕೂಡ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ (Holidays for schools and colleges) ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ಸಂಬಂಧ ಗುರುವಾರ ರಾತ್ರಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ (shimoga dc gurudatt hegde) ಅವರು ಪ್ರಕಟಣೆ ಹೊರಡಿಸಿದ್ದಾರೆ. ‘ಜಿಲ್ಲೆಯಲ್ಲಿ ಸತತವಾಗಿ ಮಳೆ (continuous rain) ಬೀಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಅಂಗನವಾಡಿ (Anganwadi), ಪ್ರಾಥಮಿಕ (primary), ಪ್ರೌಢಶಾಲೆ (high school), ಪದವಿಪೂರ್ವ ಕಾಲೇಜ್ (puc), ಪದವಿ (degree), ಸ್ನಾತಕೋತ್ತರ ಪದವಿ (Master’s degree), ಐಟಿಐ (iti) ಮತ್ತು ಡಿಪ್ಲೊಮಾ ಕಾಲೇಜ್ (diploma college) ಗಳಿಗೆ ಜು. 19 ರ ಶುಕ್ರವಾರ ರಜೆ ಘೋಷಣೆ (holiday declare) ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆ : ಕಳೆದ ನಾಲ್ಕೈದು ದಿನಗಳಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ (heavy rainfall). ಕೆರೆಕಟ್ಟೆ, ಹಳ್ಳಕೊಳ್ಳ, ನದಿಗಳು (rivers) ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜು. 16 ರಂದು ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ (Holidays for schools and colleges) ಮಾಡಲಾಗಿತ್ತು. ತದನಂತರ ಜು. 18 ರಂದು ಕೂಡ ರಜೆ ಮುಂದುವರಿಸಲಾಗಿತ್ತು. ಮಳೆ ಕಡಿಮೆಯಾಗದ ಕಾರಣದಿಂದ ಜು. 19 ರಂದು ಕೂಡ ರಜೆ ಘೋಷಣೆ ಮಾಡಲಾಗಿದೆ.
ಮತ್ತೊಂದೆಡೆ, ಹವಾಮಾನ ಇಲಾಖೆಯು (meteorological department) ಮುಂದಿನ ಎರಡು ದಿನಗಳ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ.