
ಮಲೆನಾಡಲ್ಲಿ ಮುಂದುವರಿದ ಮಳೆಯಬ್ಬರ : ರೆಡ್ ಅಲರ್ಟ್ ಮುನ್ಸೂಚನೆ!
ಶಿವಮೊಗ್ಗ (shivamogga), ಜು. 19: ಮಲೆನಾಡಲ್ಲಿ ಮುಂಗಾರು ಮಳೆ (malnad monsoon rain) ಅಬ್ಬರ ಮುಂದುವರಿದಿದೆ. ನಿರಂತರ ಮಳೆ (continuous rain) ಹಾಗೂ ಬೀಸುತ್ತಿರುವ ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಹಳ್ಳಕೊಳ್ಳ, ಕೆರೆಕಟ್ಟೆ, ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹದ (flood) ಆತಂಕ ಸೃಷ್ಟಿಸಿವೆ. ಮತ್ತೊಂದೆಡೆ, ಇನ್ನೂ ಕೆಲ ದಿನಗಳವರೆಗೆ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (meteorological department) ಮುನ್ಸೂಚನೆ ನೀಡಿದ್ದು, ಶುಕ್ರವಾರ ಕೂಡ ಜಿಲ್ಲೆಗೆ ರೆಡ್ ಅಲರ್ಟ್ (red alert) ಘೋಷಿಸಿದೆ.
ಅದರಲ್ಲಿಯೂ ಹೊಸನಗರ (hosanagara), ತೀರ್ಥಹಳ್ಳಿ (thirthahalli), ಸಾಗರ (sagar) ತಾಲೂಕು ವ್ಯಾಪ್ತಿಗಳಲ್ಲಿ ಅಕ್ಷರಶಃ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಾದ ಮಾಣಿ (mani) 205 ಮಿಲಿ ಮೀಟರ್, ಯಡೂರು (yadur) 175 ಮಿ.ಮೀ., ಹುಲಿಕಲ್ (hulikall) 231 ಮಿ.ಮೀ., ಮಾಸ್ತಿಕಟ್ಟೆ (masthikatte) 235 ಮಿ.ಮೀ., ಚಕ್ರಾ (chakra) 280 ಮಿ.ಮೀ., ಸಾವೇಹಕ್ಲು (savehaklu) 182 ಮಿ.ಮೀ. ಮಳೆಯಾಗಿರುವುದು ಅಬ್ಬರಕ್ಕೆ ಸಾಕ್ಷಿಯಾಗಿದೆ.
ಸಾಗರ ತಾಲೂಕಿನಲ್ಲಿ ವರದಾ ನದಿ (varada river) ಪ್ರವಾಹ ಸೃಷ್ಟಿಸಿದೆ. ತಾಳಗುಪ್ಪ (talaguppa) ಹೋಬಳಿಯ ಕಾನ್ಲೆ, ಸೈದೂರು, ತಡಗಳಲೆ ಮೊದಲಾದ ಗ್ರಾಮಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ (agricultural land is flooded). ಆನಂದಪುರ ಸಮೀಪದ ಗೇರುಬೀಸ್ ಗ್ರಾಮದ ಸೇತುವೆ ಮೇಲೆ ಹೊಳೆ ನೀರು ಹರಿಯುತ್ತಿದೆ. ಇದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ ಎಂದು ವರದಿಗಳು ತಿಳಿಸಿವೆ.
ನಿರಂತರವಾಗಿ ಬೀಳುತ್ತಿರುವ ಭಾರೀ ಮಳೆಯಿಂದ ಶಿವಮೊಗ್ಗ ನಗರ (shimoga city) ಸೇರಿದಂತೆ ಜಿಲ್ಲೆಯ ಹಲವೆಡೆ ಮನೆಗಳ ಗೋಡೆ ಕುಸಿತ (house wall collapsed) ಪ್ರಕರಣಗಳು ವರದಿಯಾಗುತ್ತಿವೆ. ಇದರ ಜೊತೆಗೆ ಹೊಸನಗರ, ತೀರ್ಥಹಳ್ಳಿ, ಸಾಗರದ ಕೆಲವೆಡೆ ಭೂ ಕುಸಿತ (land slide), ಮರಗಳು ಬೀಳುತ್ತಿರುವ ಘಟನೆಗಳು ಕೂಡ ನಿರಂತರವಾಗಿ ವರದಿಯಾಗುತ್ತಿವೆ.
ಗಾಜನೂರು ಡ್ಯಾಂನ ತುಂಗಾ ಜಲಾಶಯದಿಂದ (gajanur tunga dam) ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುತ್ತಿರುವ (outflow) ಕಾರಣದಿಂದ, ಶಿವಮೊಗ್ಗ ನಗರದಲ್ಲಿ ತುಂಗಾ ನದಿ (tunga river) ನೀರಿನ ಹರಿವಿನಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಶುಕ್ರವಾರ ಕೂಡ ನದಿಯು ಅಪಾಯದ ಮಟ್ಟದಲ್ಲಿಯೇ (danger level) ಹರಿಯುತ್ತಿದ್ದುದು ಕಂಡುಬಂದಿತು.