Waterlogging problem during rainy season : Is Shimoga Municipal Corporation paying attention? ಮಳೆಗಾಲದ ವೇಳೆ ಜಲಾವೃತ ಸಮಸ್ಯೆ : ಗಮನಹರಿಸುವುದೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ?

ಮಳೆಗಾಲದ ವೇಳೆ ಜಲಾವೃತ ಸಮಸ್ಯೆ : ಗಮನಹರಿಸುವುದೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ?

ಶಿವಮೊಗ್ಗ, ಜು. 19: ಶಿವಮೊಗ್ಗ ಮಹಾನಗರ ಪಾಲಿಕೆ (shimoga corporation) 1 ನೇ ವಾರ್ಡ್ ಸೋಮಿನಕೊಪ್ಪ (sominakoppa) ಪ್ರದೇಶದ ಹಲವೆಡೆ ಕನಿಷ್ಠ ಮೂಲಸೌಕರ್ಯಗಳಾದ ಚರಂಡಿ, ರಸ್ತೆಯ (drainage and road system) ವ್ಯವಸ್ಥೆಯೂ ಇಲ್ಲವಾಗಿದೆ. ಪ್ರಸ್ತುತ ಬೀಳುತ್ತಿರುವ ಮಳೆಯಿಂದ (rain) ಜಲಾವೃತ ಸಮಸ್ಯೆ (waterlogging problem) ತಲೆದೋರಿದೆ. ಮನೆಗಳ ಮುಂಭಾಗ ಮಳೆ ನೀರು ನಿಂತುಕೊಳ್ಳುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಮನೆಗಳ ಮುಂಭಾಗ ಮಳೆ ನೀರು ನಿಂತುಕೊಳ್ಳುತ್ತಿರುವುದರಿಂದ ಸೊಳ್ಳೆ, ಕ್ರಿಮಿಕೀಟಗಳ (mosquitoes, insects) ಹಾವಳಿ ವಿಪರೀತವಾಗಿದೆ. ನಾಗರೀಕರು ನಾನಾ ರೀತಿಯ ರೋಗಕ್ಕೆ ತುತ್ತಾಗುವಂತಾಗಿದೆ. ಇಷ್ಟೆಲ್ಲ ಅವ್ಯವಸ್ಥೆಯಿದ್ದರೂ ಇಲ್ಲಿಯವರೆಗೂ ಸಮಸ್ಯೆ ಪರಿಹಾರಕ್ಕೆ ಪಾಲಿಕೆ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ (neglected) ಎಂದು ನಿವಾಸಿಗಳು (residents) ಆಕ್ರೋಶ ವ್ಯಕ್ತಪಡಿಸುತ್ತಾರೆ (express outrage).

‘ಮಳೆ ಹಾಗೂ ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ, ಈಗಾಗಲೇ ಹಲವು ಬಾರಿ ಪಾಲಿಕೆ ಆಡಳಿತಕ್ಕೆ (corporation administration) ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಸೌಲಭ್ಯ ಕಲ್ಪಿಸಿಲ್ಲ. ಪ್ರಸ್ತುತ ಮಳೆಗಾಲದ ವೇಳೆ (rainy season) ಎಲ್ಲೆಂದರಲ್ಲಿ ಮಳೆ ನೀರು ನಿಂತುಕೊಳ್ಳುತ್ತಿದೆ. ನಮ್ಮ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ’ ಎಂದು ಯಾರು ಇಲ್ಲದಂತಾಗಿದೆ’ ಸ್ಥಳೀಯ ನಿವಾಸಿ ಮುಸ್ಸಿ ಗೌಡ್ರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ (shimoga district incharge minister madhu bangarappa) ಗಮನಕ್ಕೆ ಸಮಸ್ಯೆ ತರಲಾಗಿದೆ.  ಇನ್ನಾದರೂ ಪಾಲಿಕೆ ಹಾಗೂ ಜಿಲ್ಲಾಡಳಿತ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಶೋಷಿತ ವೇದಿಕೆಗಳ ಮುಖಂಡ ಮಕ್ಬುಲ್ ಆಹ್ಮದ್ ಹಾಗೂ ದಾದಾ ಕಲಂದರ್ ಆಗ್ರಹಿಸಿದ್ದಾರೆ.

Heavy rains in the hills: Bhadra Dam water storage has increased substantially! ಮಲೆನಾಡಿನಲ್ಲಿ ಮಳೆಯ ಅಬ್ಬರ : ಭದ್ರಾ ಡ್ಯಾಂ ನೀರಿನ ಸಂಗ್ರಹದಲ್ಲಿ ಗಣನೀಯ ಏರಿಕೆ! Previous post ಮಲೆನಾಡಿನಲ್ಲಿ ಮಳೆಯ ಅಬ್ಬರ : ಭದ್ರಾ ಡ್ಯಾಂ ನೀರಿನ ಸಂಗ್ರಹದಲ್ಲಿ ಗಣನೀಯ ಏರಿಕೆ!
SP visits Soraba, Shikaripura, Sagar flood affected areas ಸೊರಬ, ಶಿಕಾರಿಪುರ, ಸಾಗರದ ಪ್ರವಾಹ ಪೀಡಿತ ಸ್ಥಳಗಳಿಗೆ ಎಸ್ಪಿ ಭೇಟಿ Next post ಸೊರಬ, ಶಿಕಾರಿಪುರ, ಸಾಗರದ ಪ್ರವಾಹ ಪೀಡಿತ ಸ್ಥಳಗಳಿಗೆ ಎಸ್ಪಿ ಭೇಟಿ