
ಭಾರೀ ಮಳೆ : ಶಿವಮೊಗ್ಗ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 20 ರ ಶನಿವಾರ ರಜೆ ಘೋಷಣೆ!
ಶಿವಮೊಗ್ಗ (shivamogga), ಜು. 20: ಭಾರೀ ಮಳೆ ಮುಂದುವರಿದಿದೆ (heavy rainfall). ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜು. 20 ರ ಶನಿವಾರ ಶಿವಮೊಗ್ಗ ತಾಲೂಕಿನ ಶಾಲಾ – ಕಾಲೇಜ್ ಗಳಿಗೆ ತಹಶೀಲ್ದಾರ್ ಅವರು ರಜೆ ಘೋಷಣೆ (holidays for schools and colleges) ಮಾಡಿದ್ದಾರೆ.
ಈ ಸಂಬಂಧ ತಹಶೀಲ್ದಾರ್ ಬಿ. ಎನ್. ಗಿರೀಶ್ ಅವರು ಶನಿವಾರ ಮುಂಜಾನೆ ಆದೇಶ ಹೊರಡಿಸಿದ್ದಾರೆ. ಭಾರೀ ಮಳೆ (heavy rainfall) ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಣೆ (declaration of holiday) ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಸಾಗರ (sagar), ಸೊರಬ (sorab), ಹೊಸನಗರ (hosangar), ತೀರ್ಥಹಳ್ಳಿ (thirthahalli), ಶಿಕಾರಿಪುರ (shikaripur), ಭದ್ರಾವತಿ (bhadravati) ತಾಲೂಕುಗಳ ಶಾಲಾ – ಕಾಲೇಜ್ ಗಳಿಗೆ ಜು. 20 ರಂದು ಅಲ್ಲಿನ ತಾಲೂಕು ಆಡಳಿತಗಳು ಈಗಾಗಲೇ ರಜೆ ಘೋಷಣೆ ಮಾಡಿದ್ದವು.
ಮಳೆ ಮುಂದುವರಿಕೆ : ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ವರ್ಷಧಾರೆ (heavy rainfall) ಮುಂದುವರಿದಿದೆ. ಮಳೆಯ ಜೊತೆಗೆ ಗಾಳಿ (wind) ಕೂಡ ಬೀಸುತ್ತಿದೆ. ಇದು ನಾಗರೀಕರನ್ನು ಹೈರಾಣಾಗುವಂತೆ ಮಾಡಿದೆ. ಈಗಾಗಲೇ ಜಿಲ್ಲೆಯಾದ್ಯಂತ ಹಳ್ಳಕೊಳ್ಳ, ಕೆರೆಕಟ್ಟೆ, ನದಿಗಳು (rivers) ಉಕ್ಕಿ ಹರಿಯುತ್ತಿವೆ. ಹಲವೆಡೆ ಪ್ರವಾಹ (flood) ಸೃಷ್ಟಿಸಿವೆ.
ಮನೆಗಳ ಗೋಡೆಗಳ ಕುಸಿತ, ಧರೆ ಕುಸಿತವಾಗುತ್ತಿದೆ. ಮರಗಳು ಉರುಳಿ ಬೀಳುತ್ತಿವೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಸಾಕಷ್ಟು ನಷ್ಟವಾಗುತ್ತಿದೆ. ಮತ್ತೊಂದೆಡೆ, ಹವಾಮಾನ ಇಲಾಖೆಯ (Meteorological Department) ಮುಂದಿನ ಎರಡ್ಮೂರು ದಿನಗಳ ಕಾಲ ಮಲೆನಾಡಿನಲ್ಲಿ ಭಾರೀ ಮಳೆ (heavy to heavy rainfall) ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ.