
ಮೀಟರ್ ಅಳವಡಿಸದ ಆಟೋಗಳು ಸೀಜ್!
ಶಿವಮೊಗ್ಗ, ಮಾ. 1: ಶಿವಮೊಗ್ಗ ನಗರದಲ್ಲಿ ಪ್ಯಾಸೆಂಜರ್ ಆಟೋಗಳು ನಿಯಮಾನುಸಾರ ಮೀಟರ್ ಅಳವಡಿಸಬೇಕು. ಮೀಟರ್ ಅಳವಡಿಸದ ಆಟೋಗಳನ್ನು ವಶಕ್ಕೆ ಪಡೆದು, ಚಾಲಕರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಸಂಚಾರಿ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಜಯಶ್ರೀ ಎಸ್.ಮಾನೆ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದ ಪಶ್ಚಿಮ ಟ್ರಾಫಿಕ್ ಠಾಣೆ ವೃತ್ತ ಕಚೇರಿಯಲ್ಲಿ ಆಟೋ ಚಾಲಕರ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಿ ಅವರು ಈ ಖಡಕ್ ಸೂಚನೆ ನೀಡಿದ್ದಾರೆ.
ಪ್ರತಿಯೊಂದು ಪ್ಯಾಸೆಂಜರ್ ಆಟೋಗಳು ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ನಿಯಮಗಳ ಪಾಲನೆ ಮಾಡಬೇಕು. ಪ್ರಯಾಣಿಕರಿಂದ ನಿಗದಿತ ಬಾಡಿಗೆ ಮೊತ್ತ ಮಾತ್ರ ಪಡೆಯಬೇಕು ಎಂದು ಇನ್ಸ್’ಪೆಕ್ಟರ್ ಜಯಶ್ರೀ ಎಸ್.ಮಾನೆ ಚಾಲಕರಿಗೆ ತಿಳಿಸಿದ್ದಾರೆ.
In#auto #ಆಟೋ #ಪ್ಯಾಸೆಂಜರ್_ಆಟೋ #rikshwa #ರಿಕ್ಷಾ #ಬಾಡಿಗೆದರ #fare #autofare #ಆಟೋಮೀಟರ್ #automeeter, #traffic #trafficrules #ಟ್ರಾಫಿಕ್ #ಟ್ರಾಫಿಕ್_ಪೊಲೀಸ್ #ಸಂಚಾರಿಠಾಣೆ #ಪೊಲೀಸ್, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಉದಯಸಾಕ್ಷಿ