
ಪ್ರವಾಹ ಪೀಡಿತ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಸಾಗರ / ಹೊಸನಗರ, ಜು. 21: ಭಾರೀ ಮಳೆಯಿಂದ (heavy rainfall) ಹಾನಿಗೀಡಾದ ಸಾಗರ (sagar), ಹೊಸನಗರ (hosanagar) ತಾಲೂಕಿನ ವಿವಿಧ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (district incharge minister madhu bangarappa) ಅವರು ಅಧಿಕಾರಿಗಳ ತಂಡದೊಂದಿಗೆ ಭಾನುವಾರ ಭೇಟಿಯಿತ್ತು ಪರಿಶೀಲನೆ ನಡೆಸಿದರು.
ನೆರೆ ಪೀಡಿತ (flood affected) ಸ್ಥಳಗಳಿಗೆ ಸಚಿವರು ಭೇಟಿ ನೀಡಿ ಜಲಾವೃತಗೊಂಡ ಕೃಷಿ ಜಮೀನು ಹಾಗೂ ಮಳೆಯಿಂದ ಹಾನಿಗೀಡಾದ ಕಟ್ಟಡಗಳ ವೀಕ್ಷಣೆ ಮಾಡಿ, ಸ್ಥಳೀಯರ ಅಹವಾಲುಗಳನ್ನು ಆಲಿಸಿದರು. ಈ ಎರಡು ತಾಲೂಕುಗಳ ಭೇಟಿಯ ನಂತರ, ತೀರ್ಥಹಳ್ಳಿ (thirthahalli) ತಾಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರು ಭೇಟಿ ನೀಡಲು ತೆರಳಿದರು.
ಈ ವೇಳೆ ಸಾಗರದಲ್ಲಿ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು. ವರದಾ ನದಿ (varada river) ಉಕ್ಕಿ ಹರಿಯುತ್ತಿರುವುದರಿಂದ ಹಲವೆಡೆ ಕೃಷಿ ಭೂಮಿಗಳು ಜಲಾವೃತವಾಗಿವೆ. ಜಲಾವೃತ ಸ್ಥಿತಿ ತಪ್ಪಿಸಲು 6 ಕಡೆ ಬ್ಯಾರೇಜ್ (barrage) ನಿರ್ಮಾಣಕ್ಕೆ 53 ಕೋಟಿ ರೂ. ಮಂಜೂರಾಗಿದೆ. ಮಳೆಗಾಲ (rainy season) ಪೂರ್ಣಗೊಂಡ ನಂತರ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮಳೆ ಸಂಬಂಧಿತ ಘಟನೆಗಳಲ್ಲಿ (rain related incidents) ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
More Stories
hosanagara | ಕಾಡಿನ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬೈಕ್ ಸವಾರನಿಗೆ ನೆರವಾದ ಪೊಲೀಸರು!
Hosnagar, D. 24: The incident took place in the early morning of December 24 in the area of Rippon Pette Police Station of Hosanagar taluk where the police of Hedhari patrol vehicle gave first aid to the rider who fell down from the bike and was bleeding and was in an unconscious state.