
ನಿರುದ್ಯೋಗಿಗಳಿಗೆ ಮಾಸಾಶನ ನೀಡುವ ಯುವನಿಧಿ ಯೋಜನೆಗೆ ಆನ್ಲೈನ್ ಅರ್ಜಿ ಆಹ್ವಾನ
ಶಿವಮೊಗ್ಗ (shivamogga), ಜು. 22: ಕರ್ನಾಟಕ ಸರ್ಕಾರದ ಯುವನಿಧಿ (yuvanidhi) ಯೋಜನೆಗೆ ನೋಂದಣೆ ಚಾಲ್ತಿಯಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್ (seva sindhu portal) ಮೂಲಕ ಆನ್‍ಲೈನ್ ನೋಂದಣಿ (online registration through seva sindhu portal) ಆಹ್ವಾನಿಸಿದೆ.
2022-23ನೇ ಹಾಗೂ ನಂತರದ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೊಮಾ (diploma) ಪಡೆದು ನಿರುದ್ಯೋಗಿಯಾಗಿರುವ (unemployed) ಅರ್ಹರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂ. 3000/- (ಪದವೀಧರ ನಿರುದ್ಯೋಗಿಗಳು) ಹಾಗೂ ರೂ. 1500/- (ಡಿಪ್ಲೋಮಾ/diploma ಪಡೆದ ನಿರುದ್ಯೋಗಿಗಳು) ನೇರ ನಗದು ಬ್ಯಾಂಕ್ ಖಾತೆಗೆ (direct cash to bank account) ಜಮಾ ಮಾಡಲಾಗುವುದು.
ಯುವನಿಧಿ ಯೋಜನೆಯ (yuvanidhi) ಫಲಾನುಭವಿಗಳು ಪ್ರತಿ ತಿಂಗಳು ಗ್ರಾಮ ಒನ್, ಶಿವಮೊಗ್ಗ ಒನ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು. ಸ್ವಯಂ ಘೋಷಣೆ ನೀಡದಿದ್ದಲ್ಲಿ ಆ ತಿಂಗಳು ನೇರ ನಗದು ಖಾತಗೆ ಜಮಾ ಆಗುವುದಿಲ್ಲ.
ಆದ್ದರಿಂದ ಫಲಾನುಭವಿಗಳು (beneficiaries) ತಪ್ಪದೇ ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ (employment officer) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸಾಗರ ರಸ್ತೆ, 2ನೇ ತಿರುವು, ಗುತ್ಯಪ್ಪ ಕಾಲೋನಿ ಶಿವಮೊಗ್ಗ (shimoga), ದೂ.ಸಂ.:08182-255293 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.