
ಪೊಲೀಸರ ಸಕಾಲಿಕ ಕ್ರಮ : ತುಂಬಿ ಹರಿಯುತ್ತಿದ್ದ ಹೊಳೆಗೆ ಧುಮುಕುತ್ತಿದ್ದ ಮಹಿಳೆ, ಇಬ್ಬರು ಮಕ್ಕಳ ರಕ್ಷಣೆ!
ಸಾಗರ (sagar), ಜು. 23: ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಆತ್ಮಹತ್ಯೆಗೆ (suicide) ಮುಂದಾಗಿದ್ದ ಮಹಿಳೆ ಹಾಗೂ ಅವರ ಇಬ್ಬರು ಮಕ್ಕಳನ್ನು (women – childrens) ಪೊಲೀಸರು ರಕ್ಷಣೆ ಮಾಡಿದ ಸಿನಿಮೀಯ ಶೈಲಿಯ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕುಗ್ವೆ ಗ್ರಾಮದ ಬಳಿ ಜು. 22 ರಂದು ನಡೆದಿದೆ.
ಮಹಿಳೆಯೋರ್ವರು ಇಬ್ಬರು ಮಕ್ಕಳೊಂದಿಗೆ, ಕುಗ್ವೆ ಗ್ರಾಮದ (kugwe village of sagar taluk) ಹೊಳೆಯ ಬಳಿ ಮಧ್ಯಾಹ್ನ ಆಗಮಿಸಿದ್ದರು. ನೀರಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದರು (to commit suicide by diving into water). ಇದನ್ನು ಗಮನಿಸಿದ ಸಾರ್ವಜನಿಕರು ತುರ್ತು ಸಹಾಯವಾಣಿ ಸಂಖ್ಯೆ ಇ.ಆರ್.ಆರ್.ಎಸ್ – 112 (errs-112) ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಇ.ಆರ್.ಆರ್.ಎಸ್ – 112 ವಾಹನದ ಸಿಬ್ಬಂದಿಗಳಾದ ಹೆಡ್ ಕಾನ್ಸ್’ಟೇಬಲ್ (head constable) ಶಿವರುದ್ರಯ್ಯ ಎ ಆರ್ ಹಾಗೂ ವಾಹನ ಚಾಲಕರಾದ ಡಿಎಆರ್ ಎಪಿಸಿ (dar apc) ಶಿವಾನಂದ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಹೊಳೆಯಲ್ಲಿ ಧುಮುಕಲು ಮುಂದಾಗಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಸಂರಕ್ಷಿಸಿದ್ದಾರೆ. ಈ ಮೂಲಕ ಮೂವರ ಜೀವ ಉಳಿಸಿದ್ದಾರೆ. ಸಿಬ್ಬಂದಿಗಳ ಸಕಾಲಿಕ ಕ್ರಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ (shimoga sp) ಜಿ. ಕೆ. ಮಿಥುನ್ ಕುಮಾರ್ (g k mithunkumar) ಅವರು ಪ್ರಶಂಸೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
More Stories
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರ ಅಕ್ರಮ ಮರಳು ಲೂಟಿಗೆ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?
shimoga | A temporary break in illegal sand looting after the case of the female officer: Does the administration need to wake up?
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರಕ ಅಕ್ರಮ ಮರಳು ಲೂಟಿಗೆ ತಾತ್ಕಾಲಿಕ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?