Further reduction in the inflow of Linganamakki, Tunga, Bhadra reservoirs! ಲಿಂಗನಮಕ್ಕಿ ತುಂಗಾ ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಮತ್ತಷ್ಟು ಇಳಿಕೆ!

ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಮತ್ತಷ್ಟು ಇಳಿಕೆ!

ಶಿವಮೊಗ್ಗ (shivamogga), ಜು. 23: ಜಲಾನಯನ ಪ್ರದೇಶ ವ್ಯಾಪ್ತಿಯ ಮಳೆ (rain) ಅಬ್ಬರ ಕಡಿಮೆಯಾಗಿರುವುದರಿಂದ ಜಿಲ್ಲೆಯ ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಜಲಾಶಯಗಳ (reservoirs) ಒಳಹರಿವಿನಲ್ಲಿ (inflow) ದಿನದಿಂದ ದಿನಕ್ಕೆ ಇಳಿಕೆ ಕಂಡುಬರಲಾರಂಭಿಸಿದೆ.

ಮಂಗಳವಾರ ಬೆಳಿಗ್ಗೆ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವು 41,269 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಮತ್ತೊಂದೆಡೆ ಹೊರಹರಿವಿನ (out flow) ಪ್ರಮಾಣದಲ್ಲಿ ಏರಿಕೆಯಾಗಿದ್ದು, 2400 ಕ್ಯೂಸೆಕ್ (cusec) ನೀರನ್ನು ಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 1799 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು 1770. 7 ಅಡಿ ನೀರು ಸಂಗ್ರಹವಾಗಿತ್ತು.

ಭದ್ರಾ ಡ್ಯಾಂ (bhadra dam) ಒಳಹರಿವು 20,045 ಕ್ಯೂಸೆಕ್’ಗೆ ಇಳಿಕೆಯಾಗಿದೆ. 196 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ (dam water level) 168. 2 (ಗರಿಷ್ಠ ಮಟ್ಟ : 186) ಅಡಿ ಇದೆ. ಕಳೆದ ವರ್ಷ (last year) ಇದೇ ದಿನದಂದು ಡ್ಯಾಂನಲ್ಲಿ 145 ಅಡಿ ನೀರು ಸಂಗ್ರಹವಾಗಿತ್ತು.

ಉಳಿದಂತೆ ತುಂಗಾ ಜಲಾಶಯ (tunga dam) ಈಗಾಗಲೇ ಗರಿಷ್ಠ ಮಟ್ಟವಾದ 588. 24 ಅಡಿ ತಲುಪಿದೆ. ಪ್ರಸ್ತುತ 33,685 ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊಸಪೇಟೆಯ (hospet) ತುಂಗಭದ್ರಾ ಜಲಾಶಯಕ್ಕೆ ( tungabhadra dam) ಹರಿಬಿಡಲಾಗುತ್ತಿದೆ.

ಮಳೆ ವಿವರ : ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ (raginfall) ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಾದ ಮಾಣಿ (mani) 55 ಮಿಲಿ ಮೀಟರ್, ಯಡೂರು (yadur)71ಮಿ.ಮೀ., ಹುಲಿಕಲ್ (hulikall) 97 ಮಿ.ಮೀ., ಮಾಸ್ತಿಕಟ್ಟೆ (masthikatte) 87 ಮಿ.ಮೀ., ಚಕ್ರಾ (chakra) 76 ಮಿ.ಮೀ., ಸಾವೇಹಕ್ಲು (savehakklu) 60 ಮಿ.ಮೀ. ಮಳೆಯಾಗಿದೆ.

ಶಿವಮೊಗ್ಗ 13 ಮಿ.ಮೀ., ಭದ್ರಾವತಿ 6. 80 ಮಿ.ಮೀ., ತೀರ್ಥಹಳ್ಳಿ 36. 90 ಮಿ.ಮೀ., ಸಾಗರ 62. 50 ಮಿ.ಮೀ., ಶಿಕಾರಿಪುರ 19. 50 ಮಿ.ಮೀ., ಸೊರಬ 36. 30 ಮಿ.ಮೀ. ಹಾಗೂ ಹೊಸನಗರದಲ್ಲಿ47ಮಿ.ಮೀ. ಮಳೆಯಾಗಿದೆ. 

Timely action of the police: The woman who was diving into the overflowing stream the two children were saved! ಪೊಲೀಸರ ಸಕಾಲಿಕ ಕ್ರಮ : ತುಂಬಿ ಹರಿಯುತ್ತಿದ್ದ ಹೊಳೆಗೆ ಧುಮುಕುತ್ತಿದ್ದ ಮಹಿಳೆ ಇಬ್ಬರು ಮಕ್ಕಳ ರಕ್ಷಣೆ! Previous post ಪೊಲೀಸರ ಸಕಾಲಿಕ ಕ್ರಮ : ತುಂಬಿ ಹರಿಯುತ್ತಿದ್ದ ಹೊಳೆಗೆ ಧುಮುಕುತ್ತಿದ್ದ ಮಹಿಳೆ, ಇಬ್ಬರು ಮಕ್ಕಳ ರಕ್ಷಣೆ!   
Accused of forcing names of CM, Ministers in Valmiki Corporation scam: Symbolic protest by Congress party ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ, ಸಚಿವರ ಹೆಸರೇಳಲು ಒತ್ತಾಯ ಆರೋಪ : ಕಾಂಗ್ರೆಸ್ ಪಕ್ಷದಿಂದ ಸಾಂಕೇತಿಕ ಪ್ರತಿಭಟನೆ Next post ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ, ಸಚಿವರ ಹೆಸರೇಳಲು ಒತ್ತಾಯ ಆರೋಪ : ಕಾಂಗ್ರೆಸ್ ಪ್ರತಿಭಟನೆ