
ಬಸ್ – ಕಾರು ಡಿಕ್ಕಿ : ಶಿವಮೊಗ್ಗ ಕ್ರೈಸ್ತ ಧರ್ಮ ಗುರುಗಳು ಸ್ಥಳದಲ್ಲಿಯೇ ಸಾವು!
ಶಿವಮೊಗ್ಗ (shivamogga), ಜು. 23: ಹೊನ್ನಾಳ್ಳಿ ತಾಲೂಕಿನ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ (honnali taluk nyamathi police station) ಚಿನ್ನಿಕಟ್ಟೆಯ ಸವಳಂಗ ರಸ್ತೆಯಲ್ಲಿ ಮಂಗಳವಾರ, ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ (ksrtc bus – car) ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ (accident), ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕ್ರೈಸ್ತ ಧರ್ಮ ಗುರುಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಶಿವಮೊಗ್ಗ ಕ್ಯಾಥೋಲಿಕ್ ಕ್ರೈಸ್ತ ಧರ್ಮ ಕ್ಷೇತ್ರದ ಫಾದರ್ (Father of Shimoga Catholic Church) ಆಂಥೋಣಿ ಪೀಟರ್ (51) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಸ್ಟೀಫನ್ ಎಂಬುವರು ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ (shimoga) ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಆಂಥೋಣಿ ಪೀಟರ್ ಅವರು ಶಿಕಾರಿಪುರ (shikaripur) ಕಿರಿಯ ಪುಷ್ಪ ಸಂತ ತೆರೆಸಾ ಚರ್ಚ್ ಧರ್ಮ ಗುರುಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಫಾದರ್ ವೀರೇಶ್ ಮೊರಾಸ್ (father veeresh moras) ಅವರು ತಿಳಿಸಿದ್ದಾರೆ.
‘ಆಂಥೋಣಿ ಪೀಟರ್ ಅವರು ಶಿವಮೊಗ್ಗದವರಾಗಿದ್ದಾರೆ. ಅತ್ಯಂತ ಪ್ರತಿಭಾವಂತ ಧರ್ಮಗುರುಗಳಾಗಿದ್ದರು. ಡಾಕ್ಟರೇಟ್ ಪದವಿ ಪಡೆದಿದ್ದರು. ಅವರ ಅಕಾಲಿಕ ನಿಧನ ಭಕ್ತ ಸಮೂಹದಲ್ಲಿ ಆಘಾತ ಉಂಟು ಮಾಡಿದೆ. ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಜು. 25 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ (Sacred Heart Church Shimoga) ಆಂಥೋಣಿ ಪೀಟರ್ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ’ ಎಂದು ಫಾದರ್ ವೀರೇಶ್ ಮೊರಾಸ್ ಅವರು ಇದೇ ವೇಳೆ ತಿಳಿಸಿದ್ದಾರೆ.