
ಆರಂಭಗೊಂಡ ವೇಗದಲ್ಲಿಯೇ ಸ್ಥಗಿತಗೊಂಡ ಬಿಸಿಯೂಟ : ಗಮನಹರಿಸುವರೆ ಶಿಕ್ಷಣ ಸಚಿವರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 24: ಶಿಕ್ಷಣ ಸಚಿವ ಮಧು ಬಂಗಾರಪ್ಪ (education minister mahdu bangarappa) ಅವರ ಸೂಚನೆ ಮೇರೆಗೆ ಶಿವಮೊಗ್ಗ ನಗರದ ಸೋಮಿನಕೊಪ್ಪದಲ್ಲಿರುವ ಮೌಲಾನ ಆಜಾದ್ ಮಾದರಿ ಸರ್ಕಾರಿ ಶಾಲೆ (maulna azad govt school) ಮಕ್ಕಳಿಗೆ ಆರಂಭಗೊಂಡಿದ್ದ ಬಿಸಿಯೂಟ (midday meal) ಸೌಲಭ್ಯ, ಕಳೆದ ಕೆಲ ದಿನಗಳಿಂದ ದಿಢೀರ್ ಸ್ಥಗಿತಗೊಳಿಸಲಾಗಿದೆ. ಇದು ಮಕ್ಕಳಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ!
ಕಳೆದ ಎರಡು ವರ್ಷಗಳ ಹಿಂದೆ ಸೋಮಿನಕೊಪ್ಪದಲ್ಲಿ (sominakoppa) ಮೌಲಾನ ಆಜಾದ್ ಶಾಲೆ ಆರಂಭಗೊಂಡಿತ್ತು. 6 ರಿಂದ 10 ನೇ ತರಗತಿವರೆಗಿದೆ. ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಣೆ ಮಾಡುತ್ತಿದೆ.
ಆದರೆ ಸದರಿ ಸರ್ಕಾರಿ ಶಾಲೆ ಮಕ್ಕಳಿಗೆ (govt school childrens) ಬಿಸಿಯೂಟ, ಹಾಲು, ಬಾಳೆಹಣ್ಣು ಸೇರಿದಂತೆ ಇತರೆ ಸರ್ಕಾರಿ ಶಾಲೆ ಮಕ್ಕಳಿಗೆ ನೀಡಲಾಗುವ ಸೌಲಭ್ಯಗಳು (facilities) ದೊರಕುತ್ತಿರಲಿಲ್ಲ. ಇತ್ತೀಚೆಗೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಜನಸ್ಪಂದನ (Janaspandana) ಸಭೆಯ ವೇಳೆ, ಸದರಿ ಶಾಲೆಯ ಕೆಲ ಮಕ್ಕಳು ಸಚಿವರಿಗೆ ಅಹವಾಲು ತೋಡಿಕೊಂಡಿದ್ದರು.
‘ಶಾಲೆಯಲ್ಲಿ ಬಿಸಿಯೂಟ ಸೇರಿದಂತೆ ಇತರೆ ಸರ್ಕಾರಿ ಶಾಲೆ ಮಕ್ಕಳಿಗೆ ನೀಡಲಾಗುವ ಪೌಷ್ಠಿಕಾಂಶ ಆಹಾರ ದೊರಕುತ್ತಿಲ್ಲ. ಹಿಂದಿ, ದೈಹಿಕ ಶಿಕ್ಷಕರ (teachers) ನೇಮಕ ಮಾಡಿಲ್ಲ. ಆಟದ ಮೈದಾನವಿಲ್ಲ. ಶುದ್ದ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಕಂಪ್ಯೂಟರ್ ಶಿಕ್ಷಣ ಲಭ್ಯವಾಗುತ್ತಿಲ್ಲ’ ಎಂಬುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಚಿವರ ಮುಂದಿಟ್ಟಿದ್ದರು.
ಮಕ್ಕಳ ಸಮಸ್ಯೆ ಆಲಿಸಿದ್ದ ಮಧು ಬಂಗಾರಪ್ಪ (madhu bangarappa) ಅವರು, ಕಾಲಮಿತಿಯೊಳಗೆ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ತತ್’ಕ್ಷಣವೇ ಶಿಕ್ಷಣ ಇಲಾಖೆ ಮೂಲಕವೇ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ ವಿತರಣೆ ಮಾಡುವಂತೆ ಆದೇಶಿಸಿದ್ದರು. ಹಿಂದಿ ಶಿಕ್ಷಕರ ಕೊರತೆ ಮತ್ತೀತರ ವಿಷಯಗಳ ಕುರಿತಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು.
ಸಚಿವರು ಸೂಚನೆ ಕೊಟ್ಟ ಮರು ದಿನದಿಂದಲೇ, ಸಮೀಪದ ಸರ್ಕಾರಿ ಶಾಲೆಯಿಂದ ಮೌಲಾನಾ ಆಜಾದ್ ವಿದ್ಯಾರ್ಥಿಗಳಿಗೂ ಬಿಸಿಯೂಟ ವಿತರಣೆ ಆರಂಭಿಸಲಾಗಿತ್ತು. ಆದರೆ ಹಾಲು, ಬಾಳೆಹಣ್ಣು, ಚುಕ್ಕಿ ಪೌಷ್ಠಿಕಾಂಶ ಲಭ್ಯವಾಗಿರಲಿಲ್ಲ. ಇದೀಗ ಕಳೆದ ಕೆಲ ದಿನಗಳಿಂದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಬಿಸಿಯೂಟವನ್ನು ಕೂಡ ದಿಢೀರ್ ಸ್ಥಗಿತಗೊಳಿಸಲಾಗಿದೆ!
ಗಮನಹರಿಸುವರೆ ಸಚಿವರು? : ‘ಮೌಲಾನಾ ಆಜಾದ್ ಶಾಲೆಯಲ್ಲಿಯೇ ಮಕ್ಕಳಿಗೆ ಬಿಸಿಯೂಟ ತಯಾರಿಸಿ ವಿತರಣೆ ಮಾಡುವ ವ್ಯವಸ್ಥೆ ಆರಂಭವಾಗಬೇಕಾಗಿದೆ. ಈಗಾಗಲೇ ಶಾಲೆಯಲ್ಲಿ ಇದಕ್ಕಾಗಿ ಪ್ರತ್ಯೇಕ ಕೊಠಡಿಯನ್ನು ಕೂಡ ಸಿದ್ದಪಡಿಸಲಾಗಿದೆ. ಈ ನಿಟ್ಟಿನಲ್ಲಿ ಸಚಿವ ಮಧು ಬಂಗಾರಪ್ಪ ಅವರು ಆದ್ಯ ಗಮನಹರಿಸಬೇಕಾಗಿದೆ.
ಹಾಗೆಯೇ ಹಿಂದಿ ಶಿಕ್ಷಕರ ನೇಮಕ, ಶುದ್ಧ ಕುಡಿಯುವ ನೀರು ಲಭ್ಯತೆ, ಕಂಪ್ಯೂಟರ್ ಶಿಕ್ಷಣ ಮತ್ತೀತರ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿಯೂ ಸಚಿವರು ಕಾಲಮಿತಿಯೊಳಗೆ ಕ್ರಮಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಪೋಷಕರಾದ ದಾದಾ ಕಲಂದರ್ ಅವರು ಮನವಿ ಮಾಡುತ್ತಾರೆ.
ಪ್ರತಿಭಟನೆ ನಡೆಸುವುದು ಅನಿವಾರ್ಯ : ಪೋಷಕರ ಎಚ್ಚರಿಕೆ
*** ‘ಮೌಲಾನಾ ಆಜಾದ್ ಸರ್ಕಾರಿ ಶಾಲೆ ಮಕ್ಕಳಿಗೆ ಆರಂಭಿಸಿದ್ದ ಬಿಸಿಯೂಟ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಹಿಂದಿ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿದಂತೆ ಕೆಲ ಶಿಕ್ಷಕರ ನೇಮಕ ಇಲ್ಲಿಯವರೆಗೂ ಆಗಿಲ್ಲ. ಶುದ್ದ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ತಕ್ಷಣವೇ ಆಡಳಿತ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಹಾಗೆಯೇ ಇತರೆ ಸರ್ಕಾರಿ ಶಾಲೆಗಳ ರೀತಿಯಲ್ಲಿ ಸದರಿ ಶಾಲೆಯಲ್ಲಿಯೂ ಪೋಷಕರ ಸಮಿತಿ (sdmc) ರಚಿಸಬೇಕು. ಇಲ್ಲದಿದ್ದರೆ ತಮ್ಮ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಪೋಷಕರೂ ಹಾಗೂ ಸಾಮಾಜಿಕ ಹೋರಾಟಗಾರರಾದ ದಾದಾ ಕಲಂದರ್ ಅವರು ಎಚ್ಚರಿಕೆ ನೀಡಿದ್ದಾರೆ.