
ಚಕ್ರಾದಲ್ಲಿ ಮುಂದುವರಿದ ಮಳೆ ಆರ್ಭಟ : 290 ಮಿ.ಮೀ. ವರ್ಷಧಾರೆ! – ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ
ಶಿವಮೊಗ್ಗ (shivamogga), ಜು. 26: ಮಲೆನಾಡಲ್ಲಿ ಮುಂಗಾರು ಮಳೆ (monsoon rain) ಮುಂದುವರಿದಿದೆ. ಹೊಸನಗರ ತಾಲೂಕಿನ ಚಕ್ರಾ (chakra) ಸುತ್ತಮುತ್ತಲು ವರ್ಷಧಾರೆ ಅಬ್ಬರ (heavy rainfall) ಜೋರಾಗಿದೆ. ಚಕ್ರಾದಲ್ಲಿ 24 ಗಂಟೆ ಅವಧಿಯಲ್ಲಿ 290 ಮಿಲಿ ಮೀಟರ್ (ಮಿ.ಮೀ.) ಮಳೆಯಾಗಿದೆ!
ಶುಕ್ರವಾರ (july 26) ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ (rain) ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ (western ghat) ಪ್ರದೇಶಗಳಾದ ಮಾಣಿಯಲ್ಲಿ (mani) 148 ಮಿ.ಮೀ., ಯಡೂರು (yadur) 157 ಮಿ.ಮೀ., ಹುಲಿಕಲ್ (hulikal) 180 ಮಿ.ಮೀ., ಮಾಸ್ತಿಕಟ್ಟೆ (masthikatte) 165 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ (savehakklu) 114 ಮಿ.ಮೀ. ಮಳೆಯಾಗಿದೆ.
ಉಳಿದಂತೆ ಶಿವಮೊಗ್ಗದಲ್ಲಿ (shimoga) 17. 30 ಮಿ.ಮೀ., ಭದ್ರಾವತಿ (bhadravati) 16. 30 ಮಿ.ಮೀ., ತೀರ್ಥಹಳ್ಳಿ (thirthahalli) 90. 20 ಮಿ.ಮೀ., ಸಾಗರ (sagr) 55 ಮಿ.ಮೀ. ಶಿಕಾರಿಪುರ (shikaripur) 26. 20 ಮಿ.ಮೀ., ಸೊರಬ (sorab) 39 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagar) 58. 20 ಮಿ.ಮೀ. ಮಳೆಯಾಗಿದೆ.
ಡ್ಯಾಂಗಳ ವಿವರ : ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಜಲಾಶದ (linganamakki dam) ನೀರಿನ ಮಟ್ಟ 1804. 8 (ಗರಿಷ್ಠ ಮಟ್ಟ : 1819) ಅಡಿಯಿದೆ. 65,147 ಕ್ಯೂಸೆಕ್ ಒಳಹರಿವಿದ್ದು (inflow), 1853 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1782. 3 ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಜಲಾಶಯ (bhadra reservoir) ನೀರಿನ ಮಟ್ಟ 174 ಅಡಿ 3 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. 35,318 ಕ್ಯೂಸೆಕ್ ಒಳಹರಿವಿದ್ದು, 202 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ (out flow). ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 155. 3 ಅಡಿಯಿತ್ತು.
ತುಂಗಾ ಜಲಾಶಯವು (tunga dam) ಈಗಾಗಲೇ ಗರಿಷ್ಠ ಮಟ್ಟವಾದ 588. 24 ಮೀಟರ್ ತಲುಪಿದೆ. ಪ್ರಸ್ತುತ ಡ್ಯಾಂನ ಒಳಹರಿವು 58,879 ಕ್ಯೂಸೆಕ್ ಇದೆ. ಆದರೆ 63,612 ಕ್ಯೂಸೆಕ್ ನೀರನ್ನು ಹೊಸಪೇಟೆಯ (hospet) ತುಂಗಭದ್ರಾ ಜಲಾಶಯಕ್ಕೆ (tungabhadra dam) ಹೊರ ಬಿಡಲಾಗುತ್ತಿದೆ.