
ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಇಬ್ಬರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗ (shivamogga), ಜು. 26: ಅಪ್ರಾಪ್ತ ಬಾಲಕಿ (minor girl) ಮೇಲೆ ಲೈಂಗಿಕ ದೌರ್ಜನ್ಯ (sexual assault) ಎಸಗಿದ ಇಬ್ಬರಿಗೆ, 20 ವರ್ಷ ಕಠಿಣ ಜೈಲು ಶಿಕ್ಷೆ (rigorous imprisonment) ವಿಧಿಸಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್.ಟಿ.ಎಸ್.ಸಿ-1 (ಪೋಕ್ಸೊ) ನ್ಯಾಯಾಲಯ ತೀರ್ಪು ನೀಡಿದೆ.
ಶಿವಮೊಗ್ಗ ತಾಲೂಕಿನ ನಿವಾಸಿಗಳಾದ 37 ವರ್ಷ ಹಾಗೂ 39 ವರ್ಷದ ವ್ಯಕ್ತಿಗಳೇ ಶಿಕ್ಷೆಗೆ ಗುರಿಯಾದವರಾಗಿದ್ದಾರೆ (ಪೋಕ್ಸೋ ಕಾಯ್ದೆಯಡಿ ಹೆಸರು ಬಹಿರಂಗಪಡಿಸುವಂತಿಲ್ಲ). ಪ್ರಕರಣದ 1 ನೇ ಆರೋಪಿಗೆ 1.15 ಲಕ್ಷ ರೂ. ದಂಡ ಹಾಗೂ 2 ನೇ ಆರೋಪಿಗೆ 1.05 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ (fine) ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 1 ವರ್ಷ ಸಾದಾ ಜೈಲು ಶಿಕ್ಷೆ (simple imprisonment) ಅನುಭವಿಸುವಂತೆ ನ್ಯಾಯಾಲಯ (court) ತೀರ್ಪು ನೀಡಿದೆ.
ದಂಡದ ಮೊತ್ತದಲ್ಲಿ 2 ಲಕ್ಷ ರೂ. ಮತ್ತು ಸರ್ಕಾರದಿಂದ 10 ಲಕ್ಷ ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಲು ನ್ಯಾಯಾಧೀಶರಾದ (judge) ಮೋಹನ್ ಜೆ.ಎಸ್. ಅವರು 23-7-2024 ರಂದು ನೀಡಿದ ತೀರ್ಪಿನಲ್ಲಿ (judgment) ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ (government prosecutor) ಶ್ರೀಧರ್ ಹೆಚ್. ಆರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 2023 ನೇ ಸಾಲಿನಲ್ಲಿ ಘಟನೆ ನಡೆದಿತ್ತು. 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ (kumsi police station) ಪ್ರಕರಣ ದಾಖಲಾಗಿತ್ತು. ಇನ್ಸ್’ಪೆಕ್ಟರ್ (inspector) ಹರೀಶ್ ಕೆ. ಪಾಟೀಲ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (chargesheet) ದಾಖಲಿಸಿದ್ದರು.