
180 ಅಡಿ ತಲುಪಿದ ಭದ್ರಾ ಡ್ಯಾಂ : ಒಳಹರಿವಿನಲ್ಲಿ ಇಳಿಕೆ!
ಶಿವಮೊಗ್ಗ (shivamogga), ಜು. 28: ಕಳೆದ ವರ್ಷ ಮಳೆ ಕೊರತೆಯಿಂದ ಭಾರೀ ಪ್ರಮಾಣದ ನೀರಿನ ಕೊರತೆ ಎದುರಿಸಿದ್ದ ಮಧ್ಯ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾದ ಭದ್ರಾ (bhadra dam), ಪ್ರಸ್ತುತ ವರ್ಷ ಬೀಳುತ್ತಿರುವ ಉತ್ತಮ ಮುಂಗಾರು ಮಳೆಗೆ (monsoon rain) ಗರಿಷ್ಠ ಮಟ್ಟ ತಲುಪುವ ಹಂತಕ್ಕೆ ಬಂದಿದೆ!
july 28 ಭಾನುವಾರದ ಬೆಳಿಗ್ಗೆಯ ಮಾಹಿತಿಯಂತೆ, ಭದ್ರಾ ಡ್ಯಾಂ ನೀರಿನ ಮಟ್ಟ 180 ಅಡಿ 7 ಇಂಚು ತಲುಪಿದೆ. ಡ್ಯಾಂ ಗರಿಷ್ಠ ಮಟ್ಟವಾದ 186 ಅಡಿ ತಲುಪಲು ಇನ್ನೂ ಕೇವಲ 6 ಅಡಿ ನೀರು ಮಾತ್ರ ಬೇಕಾಗಿದೆ. ಸದ್ಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ (catchment areas) ಮಳೆಯ ತೀವ್ರತೆಯಲ್ಲಿ ಕೊಂಚ ಇಳಿಕೆಯಾಗಿದೆ.
ಇದರಿಂದ ಡ್ಯಾಂಗೆ ಹರಿದು ಬರುತ್ತಿರುವ (inflow) ನೀರಿನ ಪ್ರಮಾಣ ತುಸು ಇಳಿಕೆಯಾಗಿದೆ. ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂನ ಒಳಹರಿವು 35,557 ಕ್ಯೂಸೆಕ್ ಇದೆ. ಶನಿವಾರ ಈ ಪ್ರಮಾಣ 49 ಸಾವಿರ ಕ್ಯೂಸೆಕ್ ನಷ್ಟಿತ್ತು. ಒಟ್ಟಾರೆ ಡ್ಯಾಂನಲ್ಲಿ 64. 877 ಟಿಎಂಸಿ ನೀರು ಸಂಗ್ರಹವಾಗಿದೆ.
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆ (heavy rainfall) ಮುಂದುವರಿದರೆ, ಇನ್ನೆರೆಡು ಮೂರು ದಿನಗಳಲ್ಲಿ ಡ್ಯಾಂ ಗರಿಷ್ಠ ಮಟ್ಟ (bhadra dam water level) ತಲುಪುವ ಸಾಧ್ಯತೆಯಿದೆ ಎಂದು ಭದ್ರಾ ಜಲಾಶಯ ವ್ಯಾಪ್ತಿಯ ಇಂಜಿನಿಯರ್ ಗಳು ಅಭಿಪ್ರಾಯಪಡುತ್ತಾರೆ.
ಒಟ್ಟಾರೆ ಪ್ರಸ್ತುತ ವರ್ಷ ಭದ್ರಾ ಜಲಾಶಯ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ (maximum level) ಬರಲಾರಂಭಿಸಿರುವುದು ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ (farmers of shimoga – davangere districts) ಮೊಗದಲ್ಲಿ ಮಂದಹಾಸ ಮೂಡಿಸಿದೆ.