In the heart of Shimoga 'Gundi danger!' : Is the administration turning a blind eye? ಶಿವಮೊಗ್ಗದ ಹೃದಯ ಭಾಗದಲ್ಲಿಯೇ ‘ಗುಂಡಿ ಗಂಡಾಂತರ!’ : ಕಣ್ಮುಚ್ಚಿ ಕುಳಿತ್ತಿದೆಯೇ ಆಡಳಿತ? ವರದಿ : ಬಿ. ರೇಣುಕೇಶ್ b renukesha

ಶಿವಮೊಗ್ಗದ ಹೃದಯ ಭಾಗದಲ್ಲಿಯೇ ‘ಗುಂಡಿ ಗಂಡಾಂತರ!’ : ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?

ಶಿವಮೊಗ್ಗ (shivamogga), ಜು. 29: ಶಿವಮೊಗ್ಗ ನಗರದ ಹೃದಯ ಭಾಗ, ಅತೀ ಹೆಚ್ಚು ಜನ – ವಾಹನ ಸಂಚಾರ ದಟ್ಟಣೆಯಿರುವ, ಮಹಾನಗರ ಪಾಲಿಕೆ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಶಿವಪ್ಪನಾಯಕ ಸರ್ಕಲ್ (shivappa nayak circle) ಸಮೀಪದ ಬಿ.ಹೆಚ್. ರಸ್ತೆಯಲ್ಲಿ (b h road) ‘ಗುಂಡಿ ಗಂಡಾಂತರ’ ಎದುರಾಗಿದೆ. ಜನ – ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ!

ಪಾಲಿಕೆ ಕಚೇರಿ ಎದುರಿನ ಕುಚಲಕ್ಕಿ ಕೇರಿ ಹಾಗೂ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಂತಿರುವ ಪುಟ್’ಪಾತ್ ನಲ್ಲಿ, ಕಳೆದ ಸರಿಸುಮಾರು 20 ದಿನಗಳ ಹಿಂದೆ ಗುಂಡಿ (hole) ತೆಗೆಯಲಾಗಿದೆ. ಕುಡಿಯುವ ನೀರು (dirnking water) ಪೂರೈಕೆಯಲ್ಲಿನ ವ್ಯತ್ಯಯದ ಕಾರಣದಿಂದ, ಗುಂಡಿ ತೆಗೆದು ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು.

ಆದರೆ ಇಲ್ಲಿಯವರೆಗೂ ಗುಂಡಿ ಮುಚ್ಚುವ ಕನಿಷ್ಠ ಕಾಳಜಿಯನ್ನು ಸಂಬಂಧಿಸಿದ ಇಲಾಖೆಯವರು ನಡೆಸಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಸ್ಥಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ (Appropriate precautionary measures) ಪಾಲನೆಯೂ ಮಾಡಿಲ್ಲ ಎಂದು ಸ್ಥಳೀಯ ವರ್ತಕರು ದೂರುತ್ತಾರೆ.

ಜನನಿಬಿಡ – ವಾಹನ ಸಂಚಾರ ದಟ್ಟಣೆಯಿರುವ (vehicular traffic) ರಸ್ತೆಯಲ್ಲಿಯೇ ಇಷ್ಟೊಂದು ನಿರ್ಲಕ್ಷ್ಯ ವಹಿಸಲಾಗಿದೆ. ಪ್ರಸ್ತುತ ಮಳೆ (rain) ಬೀಳುತ್ತಿದೆ. ಯಾರಾದರೂ ಗುಂಡಿಗೆ ಬಿದ್ದು ಅನಾಹುತ ಮಾಡಿಕೊಂಡರೆ ಜವಾಬ್ದಾರಿ ಯಾರು? ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲವೇ? ಆಡಳಿತದ ಬೇಜವಾಬ್ದಾರಿ ಧೋರಣೆ ಎಷ್ಟರಮಟ್ಟಿಗೆ ಸರಿ? ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಕ್ಷಣವೇ ಸಂಬಂಧಿಸಿದ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕು. ಮುಖ್ಯ ರಸ್ತೆಯ ಪಕ್ಕದಲ್ಲಿ ತೆಗೆದು ಬಿಡಲಾಗಿರುವ ಗುಂಡಿ ಮುಚ್ಚಲು ಕ್ರಮಕೈಗೊಳ್ಳಬೇಕು. ಸುಗಮ ಜನ – ವಾಹನ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು.

ಮಳೆಗಾಲದ (rainy season) ವೇಳೆ ಜನನಿಬಿಡ ಸ್ಥಳಗಳಲ್ಲಿ (crowded places) ಗುಂಡಿ ತೆಗೆದು ಬಿಡದಂತೆ ಹಾಗೂ ಗುಂಡಿ ತೆಗೆದ ಸ್ಥಳಗಳಲ್ಲಿ ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಪಾಲನೆ ಮಾಡುವಂತೆ, ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನಾಗರೀಕರು (citizens) ಆಗ್ರಹಿಸುತ್ತಾರೆ.

monsoon rain - continued crowd to Joga falls...! ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…! Previous post ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…!
Rain in the malnad : Further decrease in Bhadra Dam inflow – Linganamakki, Tunga rise! ಮಲೆನಾಡಲ್ಲಿ ಮಳೆ : ಭದ್ರಾ ಡ್ಯಾಂ ಒಳಹರಿವಿನಲ್ಲಿ ಮತ್ತಷ್ಟು ಇಳಿಕೆ – ಲಿಂಗನಮಕ್ಕಿ, ತುಂಗಾ ಏರಿಕೆ! Next post ಮಲೆನಾಡಲ್ಲಿ ಮಳೆ : ಭದ್ರಾ ಡ್ಯಾಂ ಒಳಹರಿವಿನಲ್ಲಿ ಮತ್ತಷ್ಟು ಇಳಿಕೆ – ಲಿಂಗನಮಕ್ಕಿ, ತುಂಗಾ ಏರಿಕೆ!