Shimoga - Govt hostels becoming chaotic : Is the district administration paying attention? ಶಿವಮೊಗ್ಗ - ಅವ್ಯವಸ್ಥೆಯ ಆಗರವಾಗುತ್ತಿರುವ ಸರ್ಕಾರಿ ಹಾಸ್ಟೆಲ್ ಗಳು : ಗಮನಹರಿಸುವುದೆ ಜಿಲ್ಲಾಡಳಿತ? ವರದಿ : ಬಿ. ರೇಣುಕೇಶ್

ಶಿವಮೊಗ್ಗ – ಅವ್ಯವಸ್ಥೆಯ ಆಗರವಾಗುತ್ತಿರುವ ಸರ್ಕಾರಿ ಹಾಸ್ಟೆಲ್ ಗಳು : ಗಮನಹರಿಸುವುದೆ ಜಿಲ್ಲಾಡಳಿತ?

ಶಿವಮೊಗ್ಗ (shivamogga), ಜು. 30: ಜಿಲ್ಲೆಯಲ್ಲಿ ವಿವಿಧ ಇಲಾಖೆಯಡಿ ನಡೆಯುತ್ತಿರುವ ಹಾಸ್ಟೆಲ್ ಗಳು (govt hostels), ಅವ್ಯವಸ್ಥೆಯ ಆಗರವಾಗುತ್ತಿವೆ. ಸೌಲಭ್ಯಗಳ ದುರ್ಬಳಕೆಯಾಗುತ್ತಿವೆ. ಹೇಳುವವರು, ಕೇಳುವವರು ಯಾರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಆರೋಪಗಳು ವಿದ್ಯಾರ್ಥಿಗಳ (students) ವಲಯದಿಂದ ಕೇಳಿಬರಲಾರಂಭಿಸಿದೆ.

ಇದಕ್ಕೆ ತಾಜಾ ನಿರ್ದಶನವೆಂಬಂತೆ, ಕಳೆದ ಶನಿವಾರ ಶಿವಮೊಗ್ಗ (shimoga) ನಗರದ ಹೊರವಲಯ ಮಲ್ಲಿಗೇನಹಳ್ಳಿಯ ವಾಜಪೇಯಿ ಲೇಔಟ್ ನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ, ನಾಲ್ಕು ಹಾಸ್ಟೆಲ್ ಗಳ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿನ ಅವ್ಯವಸ್ಥೆಯ ವಿರುದ್ದ ರಾತ್ರೋರಾತ್ರಿ ಪ್ರತಿಭಟನೆ (protest) ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ಕೂಡ ನಡೆದಿತ್ತು.

ಹಾಸ್ಟೆಲ್ ನಲ್ಲಿನ ಊಟೋಪಚಾರ (catering) ವ್ಯವಸ್ಥೆ ಸರಿಯಿಲ್ಲ. ಬೆಡ್ ಗಳಿಲ್ಲ. ಸೋಲಾರ್ ವ್ಯವಸ್ಥೆಯಿಲ್ಲ. ಹಾಸ್ಟೆಲ್ ಪಕ್ಕದಲ್ಲಿಯೇ ಕೊಳಚೆ ನೀರು ಹರಿದು ಹೋಗುತ್ತಿದ್ದು ಸೊಳ್ಳೆ, ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದೆ. ಹಾಸ್ಟೆಲ್ ಗಳಲ್ಲಿ ವಾರ್ಡನ್ ಗಳು ಸರಿಯಾಗಿರುವುದಿಲ್ಲ ಎಂಬುವುದು ಸೇರಿದಂತೆ ಹಲವು ಸಮಸ್ಯೆಗಳನ್ನು (problems) ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು.

ಸ್ಥಳಕ್ಕಾಗಮಿಸಿದ್ದ ಇಲಾಖೆಯ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು.ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಕೆಲ ಸೌಲಭ್ಯಗಳನ್ನು ಕಲ್ಪಿಸಿದ್ದಾರೆಂಬ ಮಾಹಿತಿಗಳು ಕೂಡ ತಿಳಿದುಬಂದಿದೆ.

ಜನಪ್ರತಿನಿಧಿಗಳ ಕೊರತೆ: ಜಿಲ್ಲಾ ಪಂಚಾಯ್ತಿ (zilla panchayat) ಹಾಗೂ ತಾಲೂಕು ಪಂಚಾಯ್ತಿಗಳಲ್ಲಿ (taluk panchayat) ಜನಪ್ರತಿನಿಧಿಗಳಿದ್ದ ವೇಳೆ, ಸರ್ಕಾರಿ ಹಾಸ್ಟೆಲ್ ಗಳಲ್ಲಿನ ಅವ್ಯವಸ್ಥೆಗಳು ಬೆಳಕಿಗೆ ಬರುತ್ತಿದ್ದವು. ಹಾಗೆಯೇ ಜನಪ್ರತಿನಿಧಿಗಳು ಕೂಡ ನಿಯಮಿತವಾಗಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು.

ಆದರೆ ಜಿಪಂ – ತಾಪಂಗಳಲ್ಲಿ ಜನಪ್ರತಿನಿಧಿಗಳಿಲ್ಲದೆ ವರ್ಷಗಳೇ ಉರುಳಿದೆ. ಜನಪ್ರತಿನಿಧಿಗಳ ಕೊರತೆಯು ಕೂಡ ಕೆಲ ಹಾಸ್ಟೆಲ್ ಗಳಲ್ಲಿ ಅಸಮರ್ಪಕ ನಿರ್ವಹಣೆ ತಲೆದೋರುವಂತೆ ಮಾಡಿದೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ ನ್ಯಾಯಬದ್ದ ಸೌಲಭ್ಯಗಳು ದೊರಕದಂತಾಗಿದೆ ಎಂಬ ದೂರುಗಳು ಹಾಸ್ಟೆಲ್  ವಾಸಿ ವಿದ್ಯಾರ್ಥಿಗಳಿಂದ ಕೇಳಿಬರಲಾರಂಭಿಸಿದೆ.

ಭೇಟಿ ನೀಡಲಿ : ಈ ಹಿಂದೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ (District Administration, zilla Panchayat) ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ನಿಯಮಿತವಾಗಿ ದಿಢೀರ್ ಭೇಟಿ (sudden visit) ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು. ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯುತ್ತಿದ್ದರು. ಆದರೆ ಕೆಲ ಹಾಸ್ಟೆಲ್ ಗಳಿಗೆ ಹಿರಿಯ ಅಧಿಕಾರಿಗಳು ದಿಢೀರ್ ಭೇಟಿ ನೀಡುತ್ತಿಲ್ಲ ಎಂಬ ದೂರುಗಳು ಹಾಸ್ಟೆಲ್ ವಿದ್ಯಾರ್ಥಿಗಳ ವಲಯದಿಂದ ಕೇಳಿಬರುತ್ತಿದೆ.

ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು. ಸರ್ಕಾರಿ ಹಾಸ್ಟೆಲ್ ಗಳಲ್ಲಿನ ಅವ್ಯವಸ್ಥೆ ಕುರಿತಂತೆ ಕೇಳಿಬರುತ್ತಿರುವ ದೂರುಗಳ ಪರಿಹಾರಕ್ಕೆ (Redressal of complaints) ಕ್ರಮಕೈಗೊಳ್ಳಬೇಕು. ಬಡ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯಬದ್ದ ಸೌಲಭ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾಗಿದೆ.

Continued rain in different parts of Hosanagar taluk! ಹೊಸನಗರ ತಾಲೂಕಿನ ವಿವಿಧೆಡೆ ಮುಂದುವರಿದ ಮಳೆ ಆರ್ಭಟ! Previous post ಹೊಸನಗರ ತಾಲೂಕಿನ ವಿವಿಧೆಡೆ ಮುಂದುವರಿದ ಮಳೆ ಆರ್ಭಟ!
Water out of Bhadra reservoir the livelihood of farmers in Shimoga – Davangere districts! ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಡ್ಯಾಂನಿಂದ ನೀರು ಹೊರಕ್ಕೆ! Next post ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಜಲಾಶಯದಿಂದ ನೀರು ಹೊರಕ್ಕೆ!