
ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಜಲಾಶಯದಿಂದ ನೀರು ಹೊರಕ್ಕೆ!
ಶಿವಮೊಗ್ಗ, ಜು. 30: ಮಧ್ಯ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾದ, ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಜಲಾಶಯದಿಂದ (bhadra dam) ಮಂಗಳವಾರ ಬೆಳಿಗ್ಗೆಯಿಂದ ನೀರು ಹೊರ ಹರಿಸಲಾಗುತ್ತಿದೆ.
ಬೆಳಿಗ್ಗೆ ಸರಿಸುಮಾರು 9.30 ಕ್ಕೆ ಡ್ಯಾಂನ ನಾಲ್ಕು ಕ್ರಸ್ಟ್ ಗೇಟ್ ಗಳನ್ನು (dam crest gates) ತೆರೆದು ಸುಮಾರು 6 ಸಾವಿರ ಕ್ಯೂಸೆಕ್ (cusec) ನೀರನ್ನು ನದಿಗೆ ಹರಿಸಲಾಗುತ್ತಿದೆ. ಡ್ಯಾಂನಿಂದ ನೀರು ಹೊರ ಬಿಡುತ್ತಿದ್ದಂತೆ ಸ್ಥಳದಲ್ಲಿದ್ದ ನಾಗರೀಕರು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂತಸ ವ್ಯಕ್ತಪಡಿಸಿದದರು.
ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ಭದ್ರಾ ಜಲಾಶದಯ ಒಳಹರಿವು 20,774 ಕ್ಯೂಸೆಕ್ ಇದೆ. ಜಲಾಶಯ ನೀರಿನ ಮಟ್ಟ (bhadra dam water level) 183 ಅಡಿ 2 ಇದೆ. ಡ್ಯಾಂನ ಗರಿಷ್ಠ ಮಟ್ಟ 186 ಅಡಿಯಾಗಿದೆ.
ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಹಾಗೂ ಡ್ಯಾಂಗೆ ಒಳಹರಿವು (bhadra dam inflow) ಇರುವುದರಿಂದ ಮತ್ತು ಭದ್ರಾ ಸಲಹಾ ಸಮಿತಿ ನಿರ್ಧಾರದಂತೆ ಡ್ಯಾಂನಿಂದ ನೀರು ಹೊರ ಹರಿಸಲಾಗುತ್ತಿದೆ.
ಪ್ರಸ್ತುತ ಡ್ಯಾಂನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವನ್ನು ಕ್ರಮೇಣ ಹೆಚ್ಚಳ ಮಾಡಲಾಗುತ್ತಿದ್ದು, 25 ರಿಂದ 30 ಸಾವಿರ ಕ್ಯೂಸೆಕ್ ವರೆಗೆ ನೀರು ಹೊರ ಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸಂತಸ : ಕಳೆದ ವರ್ಷ ಭೀಕರ ಬರಗಾಲ ಸ್ಥಿತಿಯಿಂದ ಭದ್ರಾ ಡ್ಯಾಂ (bhadra reservoir) ಗರಿಷ್ಠ ಮಟ್ಟ ತಲುಪಿರಲಿಲ್ಲ. ಪ್ರಸ್ತುತ ವರ್ಷ ಜಲಾನಯ ಪ್ರದೇಶ ವ್ಯಾಪ್ತಿಯಲ್ಲಿ ಬಿದ್ದ ಭಾರೀ ಮಳೆಗೆ (heavy rainfall) ಭದ್ರಾ ಡ್ಯಾಂ ಗರಿಷ್ಠ ಮಟ್ಟಕ್ಕೆ ಬರುವಂತಾಗಿದೆ. ಇದೀಗ ನೀರು ಹೊರ ಹರಿಸಲಾಗುತ್ತಿದೆ. ಇದರಿಂದ ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ (farmers in Achukattu area of Shimoga – Davangere districts) ಸಂತಸ ಮೂಡಿಸಿದೆ.