ನಗರಾಭಿವೃದ್ಧಿ ಪ್ರಾಧಿಕಾರ ಅಧೀನದ ಕುವೆಂಪು ಬಡಾವಣೆ ಪಾಲಿಕೆಗೆ ಹಸ್ತಾಂತರ

ಶಿವಮೊಗ್ಗ, ಮಾ. 2: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಶಿವಮೊಗ್ಗ ನಗರ ಹೊರವಲಯ ತ್ಯಾವರೆಚಟ್ನಹಳ್ಳಿ ಸಮೀಪದ ಕುವೆಂಪು ನಗರ ವಸತಿ ಬಡಾವಣೆಯ ಎ ಯಿಂದ ಡಿ ಬ್ಲಾಕ್‍ಗಳನ್ನು, ಮುಂದಿನ ನಿರ್ವಹಣೆಗಾಗಿ ಮಾ.24 ರಿಂದ ಅನ್ವಯವಾಗುವಂತೆ ಮಹಾನಗರ ಪಾಲಿಕೆ ಆಡಳಿತಕ್ಕೆ ಹಸ್ತಾಂತರ ಮಾಡಲಾಗಿದೆ.

ಈ ಬಡಾವಣೆಗಳ ಸಾರ್ವಜನಿಕರು ಇನ್ನು ಮುಂದೆ ನೀರು, ಒಳಚರಂಡಿ, ವಿದ್ಯುತ್, ಸ್ವಚ್ಛತೆ, ನಿವೇಶನ/ಕಟ್ಟಡ ಪರವಾನಿಗೆ, ಕಂದಾಯ ಪಾವತಿ ಮುಂತಾದ ಸಾರ್ವಜನಿಕ ಕೆಲಸ ಹಾಗೂ ಅಗತ್ಯ ಸೇವೆಗಳಿಗಾಗಿ ಮಹಾನಗರ ಪಾಲಿಕೆ ಕಚೇರಿಯನ್ನು ಸಂಪರ್ಕಿಸುವಂತೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೊಟ್ರೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous post ಬೈಕ್ ಸವಾರನಿಗೆ 6500 ರೂ. ದಂಡ ವಿಧಿಸಿದ ಕೋರ್ಟ್!
Next post ಶಿವಮೊಗ್ಗ ಜಿಲ್ಲಾ ವಾಣಿಜ್ಯ- ಕೈಗಾರಿಕಾ ಸಂಘದಿಂದ ಯಡಿಯೂರಪ್ಪಗೆ ಸನ್ಮಾನ