
ಕೇರಳದ ವಯನಾಡು ಭೂ ಕುಸಿತ : 50 ಕ್ಕೂ ಅಧಿಕ ಸಾವು – ನೂರಾರು ಜನರು ಸಿಲುಕಿರುವ ಶಂಕೆ!
ವಯನಾಡು / wayanad (ಕೇರಳ), ಜು. 30: ರಣ ಭೀಕರ ಮಳೆಗೆ ಕೇರಳ (kerala) ರಾಜ್ಯದ ವಯನಾಡು (wayanad) ಜಿಲ್ಲೆ ತತ್ತರಿಸಿದೆ. ಮೆಪ್ಪಾಡುವಿನಲ್ಲಿ (meppadi) ನಿರಂತರ ಮಳೆಯಿಂದ ಭೂ ಕುಸಿತ (landslide) ಸಂಭವಿಸಿದೆ. ಸುಮಾರು 50 ಅಧಿಕ ಜನರು ಮೃತಪಟ್ಟಿದ್ದು (dead), ಇನ್ನೂ ಹಲವು ಜನರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯ (heavy rainfall) ನಡುವೆಯೇ, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ (Defense work) ನಡೆಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಹೆಲಿಕ್ಯಾಪ್ಟರ್ ಗಳ ಬಳಕೆ ಮಾಡಲಾಗಿದೆ. ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಸೇರಿದಂತೆ ವಿವಿಧ ತಂಡಗಳು ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಭೂ ಕುಸಿತ (landslide in wayanad) ದುರಂತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ (pm narendra modi) ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (kerala cm) ರವರ ಜೊತೆ ಚರ್ಚಿಸಿದ್ದಾರೆ. ಎಲ್ಲ ರೀತಿಯ ನೆರವಿನ ಹಸ್ತ ಒದಗಿಸುವ ಭರವಸೆ ನೀಡಿದ್ದಾರೆ.
ಈ ನಡುವೆ ಕೇರಳ ರಾಜ್ಯದ ಹಲವೆಡೆ ಭಾರೀ ಮಳೆ ಮುಂದುವರೆದಿದೆ. ವಯನಾಡು ಜಿಲ್ಲೆ ಸೇರಿದಂತೆ ಹಲವೆಡೆ ಮಂಗಳವಾರ ರೆಡ್ ಅಲರ್ಟ್ ಘೋಷಣೆ (red alert) ಮಾಡಲಾಗಿದ್ದು, ಧಾರಾಕಾರ ಮಳೆ (heavy to heavy rainfall) ಆಗುವ ಮುನ್ಸೂಚನೆ ನೀಡಲಾಗಿದೆ.