
ಭದ್ರಾವತಿಯಲ್ಲಿ ಪ್ರವಾಹ ಸೃಷ್ಟಿಸಿದ ಭದ್ರಾ ನದಿ!
ಭದ್ರಾವತಿ (bhadravati), ಜು. 31: ಭದ್ರಾ ಜಲಾಶಯದಿಂದ (bhadra dam) ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವ ಕಾರಣದಿಂದ, ಭದ್ರಾವತಿ ನಗರದ (bhadravati city) ಮೂಲಕ ಹಾದು ಹೋಗಿರುವ ಭದ್ರಾ ನದಿಯು (bhadra river) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ!
ಕವಲುಗುಂದಿ ಪ್ರದೇಶದಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದೆ. ನಿವಾಸಿಗಳನ್ನು ಸ್ಥಳೀಯ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಉಳಿದಂತೆ ಅಂಬೇಡ್ಕರ್ ನಗರ, ಯಕೀನ್ಷಾ ಕಾಲೋನಿ, ಚಾಮೇಗೌಡ ಲೈನ್, ಗುಂಡೂರಾವ್ ಶೆಡ್, ಗೌಳಿಗರ ಬೀದಿ ಸೇರಿದಂತೆ ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಭದ್ರಾವತಿ ಹೊಸ ಸೇತುವೆಯು (bridge) ಭದ್ರಾ ನದಿ ನೀರಿನಲ್ಲಿ ಮುಳುಗಿದ್ದು, ಸೇತುವೆ ಮೇಲೆ ಸುಮಾರು ಒಂದೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗಗಳ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ನೀರು ಹೊರಕ್ಕೆ : ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ಭದ್ರಾ ಜಲಾಶಯದ ಒಳಹರಿವು (bhadra dam inflow) 61,042 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ 41,957 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಇದರಿಂದ ಭದ್ರಾವತಿ ನಗರದ ಮೂಲಕ ಹಾದು ಹೋಗಿರುವ ಭದ್ರಾ ನದಿಯು ಮೈದುಂಬಿ ಹರಿಯುತ್ತಿದ್ದು (bhadra river over flowing), ತಗ್ಗು ಪ್ರದೇಶಗಳಲ್ಲಿ ನೆರೆ (flood) ಉಂಟು ಮಾಡಿದೆ.