
ವಯನಾಡು ಮಾದರಿಯಲ್ಲಿ ಮಲೆನಾಡಲ್ಲಿ ಭೂ ಕುಸಿತವಾಗುವ ಮುನ್ನ ಎಚ್ಚೆತ್ತುಕೊಳ್ಳುವುದೆ ಆಡಳಿತ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಆ. 1: ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ, ಭಾರೀ ಮಳೆಗೆ ಸಂಭವಿಸಿದ ರಣ ಭೀಕರ ಭೂ ಕುಸಿತ (landslide in wayanad) ಎಲ್ಲೆಡೆ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೆ, ಮಲೆನಾಡು ಭಾಗದಲ್ಲಿಯೂ ಭಾರೀ ಮಳೆಯಾದ ವೇಳೆ ಸಂಭವಿಸುತ್ತಿರುವ ಭೂ ಕುಸಿತಗಳು (malnad land slides) ಚರ್ಚೆಯ ಮುನ್ನಲೆಗೆ ಬರುವಂತೆ ಮಾಡಿದೆ.
ಪ್ರಸ್ತುತ ವರ್ಷದ ಮಳೆಗಾಲದ ವೇಳೆಯೂ (monsoon rain) ಮಲೆನಾಡು ಭಾಗದ ಹಲವೆಡೆ ಭೂ ಕುಸಿತವಾಗಿದೆ (land slide). ಮತ್ತೊಂದೆಡೆ, ಮಳೆ ಇದೇ ರೀತಿ ಮುಂದುವರಿದರೆ ಮಲೆನಾಡಿನ ಹಲವೆಡೆ ದೊಡ್ಡ ಪ್ರಮಾಣದ ಭೂ ಕುಸಿತಗಳು ಸಂಭವಿಸುವ ಆತಂಕಗಳು ಘಟ್ಟ ಪ್ರದೇಶದ (western ghat) ಜನಮಾನಸದಲ್ಲಿದೆ. ಇದು ಆಡಳಿತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ಪರಿಣಮಿಸಿದೆ.
ಮೂರು ತಾಲೂಕುಗಳು : ಮಳೆಗಾಲದ ವೇಳೆ (rainy season) ಉಂಟಾಗುವ ಭೂ ಕುಸಿತಕ್ಕೆ ಕಾರಣ ಹಾಗೂ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಈ ಹಿಂದೆ, ಭೂ ಕುಸಿತ ನಿರ್ವಹಣೆಗಾಗಿ ಕ್ರಿಯಾ ಯೋಜನೆ ರೂಪಿಸಿತ್ತು. ಹಾಗೆಯೇ ಮಲೆನಾಡ (malnad), ಕರಾವಳಿ (costal) ಪ್ರದೇಶಗಳಲ್ಲಿ ಭೂ ಕುಸಿತಗಳ ಕುರಿತಂತೆ ವೈಜ್ಞಾನಿಕ ಅಧ್ಯಯನಕ್ಕೆ ರಾಜ್ಯ ಸರ್ಕಾರ ವಿಜ್ಞಾನಿಗಳು, ಭೂಗರ್ಭ ತಜ್ಞರ ತಂಡ ರಚನೆ ಮಾಡಿತ್ತು.
ತಜ್ಞರ ಸಮಿತಿಗಳ ವರದಿ ಆಧಾರದ ಮೇಲೆ ರಾಜ್ಯದಲ್ಲಿ ಭೂ ಕುಸಿತ ಭೀತಿಯಲ್ಲಿರುವ ತಾಲೂಕುಗಳ ಪಟ್ಟಿ ಸಿದ್ದಪಡಿಸಲಾಗಿತ್ತು. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ (thirthahalli), ಹೊಸನಗರ (hosanagara) ಹಾಗೂ ಸಾಗರ (sagar) ತಾಲೂಕುಗಳನ್ನು ಗುರುತಿಸಲಾಗಿತ್ತು.
ಕಾರಣವೇನು? : ಮಲೆನಾಡಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ ನಾಶ (Forest destruction), ಕಾಡುಗಳಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳು (development works), ಪ್ರವಾಸೋದ್ಯಮ ಹೆಸರಿನಲ್ಲಿ ರೆಸಾರ್ಟ್ (resort) ಸೇರಿದಂತೆ ಬೃಹತ್ ಕಟ್ಟಡಗಳ ನಿರ್ಮಾಣ, ಸ್ವಾಭಾವಿಕ ಅರಣ್ಯ ಪ್ರದೇಶಗಳಲ್ಲಿ ನೆಡುತೋಪುಗಳ ನಿರ್ಮಾಣ ಸೇರಿದಂತೆ ಅತೀಯಾದ ಮಾನವ ಹಸ್ತಕ್ಷೇಪದಿಂದ ಭೂ ಕುಸಿತ ಹೆಚ್ಚಾಗಲು ಮುಖ್ಯ ಕಾರಣವಾಗಿದೆ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಡುತ್ತಾರೆ.
ಅದರಲ್ಲಿಯೂ 2016 ರ ನಂತರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾದ (heavy to heavy rainfall) ವೇಳೆಯಲ್ಲೆಲ್ಲ ನಿರಂತರವಾಗಿ ಭೂ ಕುಸಿತ ಪ್ರಕರಣಗಳು ಸಂಭವಿಸುತ್ತಿವೆ. ಮಲೆನಾಡಿನಲ್ಲಿ ಧಾರಾಕಾರ ಮಳೆ ಇಂದಿಗಿಂತಲೂ ಈ ಹಿಂದಿನ ದಶಕಗಳಲ್ಲಿ ಸಾಕಷ್ಟು ಜೋರಾಗಿ ಸುರಿಯುತ್ತಿತ್ತು.
ಆದರೆ ಆಗ ವರದಿಯಾಗದ ಭೂ ಕುಸಿತಗಳು ಇತ್ತೀಚೆಗೆ ವರದಿಯಾಗುತ್ತಿರುವುದನ್ನು ಗಮನಿಸಿದರೆ, ಅರಣ್ಯ ಪ್ರದೇಶಗಳಲ್ಲಿ (forest areas) ಮಾನವನ ಅತೀಯಾದ ಹಸ್ತಕ್ಷೇಪ ಮುಖ್ಯ ಕಾರಣವಾಗಿದೆ. ಇದನ್ನು ಆಡಳಿತಗಾರರು ಅರಿತುಕೊಳ್ಳಬೇಕಾಗಿದೆ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಡುತ್ತಾರೆ.
ಇನ್ನಾದರೂ ಆಡಳಿತಗಳು ಎಚ್ಚೆತ್ತುಕೊಳ್ಳಬೇಕು. ಭೂ ಕುಸಿತ (land slide) ವಿಪತ್ತ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನ ಹರಿಸಬೇಕು. ಅಗತ್ಯವಿರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಈ ಮೂಲಕ ಭವಿಷ್ಯದಲ್ಲಿ ಸಂಭವಿಸಬಹುದಾದ ವಯನಾಡು ಮಾದರಿಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಪರಿಸರ ಹೋರಾಟಗಾರರು ಆಗ್ರಹಿಸುತ್ತಾರೆ.