Linganamakki dam water has increased the weeds of Joga waterfall! ಜೋಗ ಜಲಪಾತದ ಕಳೆ ಹೆಚ್ಚಿಸಿದ ಲಿಂಗನಮಕ್ಕಿ ಡ್ಯಾಂ ನೀರು

ಜೋಗ ಜಲಪಾತದ ಕಳೆ ಹೆಚ್ಚಿಸಿದ ಲಿಂಗನಮಕ್ಕಿ ಡ್ಯಾಂ ನೀರು!

ಜೋಗಫಾಲ್ಸ್ (jogfalls), ಆ. 1: ಲಿಂಗನಮಕ್ಕಿ ಜಲಾಶಯದಿಂದ (linganamakki dam) ನೀರು ಹೊರಬಿಟ್ಟ ನಂತರ ವಿಶ್ವ ವಿಖ್ಯಾತ ಜೋಗ ಜಲಪಾತದ (world famous jogfalls) ಜಲಧಾರೆಯ ವೈಭೋಗ ಮತ್ತಷ್ಟು ಜೋರಾಗಿದ್ದು, ಅಕ್ಷರಶಃ ಭೋರ್ಗರೆಯಲಾರಂಭಿಸಿದೆ!

ಆಗಸ್ಟ್ 1 ರ ಗುರುವಾರ ಲಿಂಗನಮಕ್ಕಿ ಡ್ಯಾಂನಿಂದ (linganamakki reservoir) ಸುಮಾರು 10 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ (outflow). ಇದು ಜೋಗ (jog) ಜಲಪಾತಕ್ಕೆ ಹೊಸ ಕಳೆ ತಂದಿದೆ. ಜಲಪಾತದಿಂದ ಭಾರೀ ಪ್ರಮಾಣದ ನೀರು ಬೀಳುತ್ತಿರುವುದನ್ನು ಪ್ರವಾಸಿಗರು (tourists) ಕಣ್ತುಂಬಿಕೊಳ್ಳುತ್ತಿದ್ದಾರೆ.

ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ, ಜೋಗ ಜಲಪಾತ ಗತ ವೈಭವಕ್ಕೆ ಮರಳಲಿದೆ. ಅಮೆರಿಕಾದ ನಯಾಗಾರ ಜಲಪಾತದಂತೆ (america niagara falls) ಗೋಚರಿಸಲಿದೆ ಎಂದು ಪ್ರವಾಸಿಗರು ಅಭಿಪ್ರಾಯಪಡುತ್ತಾರೆ.

ಲಿಂಗನಮಕ್ಕಿ ಜಲಾಶಯದ (linganamakki dam) ಒಳಹರಿವು (inflow) ಹೆಚ್ಚಾದರೆ, ಡ್ಯಾಂನಿಂದ ಹೊರ ಹರಿವು ಕೂಡ ಹೆಚ್ಚಾಗಲಿದೆ. ಶನಿವಾರ, ಭಾನುವಾರ ಈ ಪ್ರಮಾಣದಲ್ಲಿ ಏರಿಕೆಯಾದರೆ ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ಒಟ್ಟಾರೆ ಲಿಂಗನಮಕ್ಕಿ ಜಲಾಶಯದಿಂದ ಹೊರಬಿಡುತ್ತಿರುವ ನೀರಿನಿಂದ ಜೋಗದ ಜಲಧಾರೆಯ (jogfalls water) ಸಿರಿ ಮತ್ತಷ್ಟು ಬೆಳಗುತ್ತಿರುವುದಂತೂ ಸತ್ಯವಾಗಿದೆ.

Prohibition around Bhadra Reservoir! ಭದ್ರಾ ಡ್ಯಾಂ ಸುತ್ತಮುತ್ತ ನಿಷೇಧಾಜ್ಞೆ! Previous post ಭದ್ರಾ ಜಲಾಶಯ ಸುತ್ತಮುತ್ತ ನಿಷೇಧಾಜ್ಞೆ ಜಾರಿ!
What is the discharge of Linganamakki, Tunga, Bhadra reservoirs? ಲಿಂಗನಮಕ್ಕಿ, ತುಂಗ, ಭದ್ರಾ ಜಲಾಶಯಗಳ ಹೊರಹರಿವು ಎಷ್ಟಿದೆ? Next post ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಹೊರಹರಿವು ಎಷ್ಟಿದೆ?