
ಲಿಂಗನಮಕ್ಕಿ ಡ್ಯಾಂನಿಂದ ಭಾರೀ ನೀರು ಹೊರಕ್ಕೆ!
ಸಾಗರ (sagar), ಆ. 3: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ (hydroelectric generating station) ಲಿಂಗನಮಕ್ಕಿ ಜಲಾಶಯದಿಂದ (linganamakki dam) ಭಾರೀ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ.
ಶನಿವಾರ ಬೆಳಿಗ್ಗೆ 10 ಗಂಟೆಯ ಮಾಹಿತಿಯಂತೆ ಜಲಾಶಯದಿಂದ (reservoir) ಸುಮಾರು 58 ಸಾವಿರ ಕ್ಯೂಸೆಕ್ ನೀರನ್ನು, 11 ಕ್ರಸ್ಟ್ ಗೇಟ್ ಗಳ ಮೂಲಕ ಹೊರ ಹರಿಸಲಾಗುತ್ತಿದೆ (out flow). ಡ್ಯಾಂನ ಒಳಹರಿವು (inflow) 61,835 ಕ್ಯೂಸೆಕ್ ಇದೆ. ಡ್ಯಾಂ ನೀರಿನ ಮಟ್ಟವನ್ನು 1815. 35 (ಗರಿಷ್ಠ ಮಟ್ಟ : 1819) ಅಡಿಗೆ ಕಾಯ್ದುಕೊಳ್ಳಲಾಗಿದೆ.
ಜಲಾನಯನ ಪ್ರದೇಶ (catchment areas) ವ್ಯಾಪ್ತಿಯಲ್ಲಿ ಮುಂಗಾರು ಮಳೆ (monsoon rain) ಮುಂದುವರಿದಿರುವುದರಿಂದ ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರಲಾರಂಭಿಸಿದೆ.
ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರ ಬಿಟ್ಟಿರುವ ಕಾರಣದಿಂದ, ವಿಶ್ವವಿಖ್ಯಾತ ಜೋಗ ಜಲಪಾತದ (world famous jogfalls) ಜಲಧಾರೆಯ ವೈಭೋಗ ಮತ್ತಷ್ಟು ಕಳೆಗಟ್ಟಿದೆ. ಅಕ್ಷರಶಃ ಜಲಪಾತ (falls) ಭೋರ್ಗರೆಯಲಾರಂಭಿಸಿದೆ.
ವೀಕೆಂಡ್ ನಲ್ಲಿಯೇ (weekend) ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರ ಹರಿಸುತ್ತಿರುವುದರಿಂದ, ಜೋಗ (jog) ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ (tourists) ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಮೈದುಂಬಿದ ನದಿ : ಲಿಂಗನಮಕ್ಕಿ ಡ್ಯಾಂನಿಂದ (linganamakki dam) ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವ ಕಾರಣದಿಂದ, ಶರಾವತಿ ನದಿ (sharavati river) ಮೈದುಂಬಿ ಹರಿಯುತ್ತಿದೆ. ನದಿಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ (flood fear) ಸೃಷ್ಟಿಸಿದೆ. ಡ್ಯಾಂನಿಂದ ಪ್ರಸ್ತುತ ಹೊರಬಿಡುತ್ತಿರುವ (dam outflow) ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾದರೆ, ತಗ್ಗು ಪ್ರದೇಶಗಳಿಗೆ (lowlying areas) ನೀರು ನುಗ್ಗುವ ಸಾಧ್ಯತೆಯಿದೆ.