
ತುಂಗಾ, ಭದ್ರಾ ಜಲಾಶಯಗಳ ಹೊರಹರಿವು ಎಷ್ಟಿದೆ?
ಶಿವಮೊಗ್ಗ (shivamooga), ಆ. 3: ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ (shimoga – davanagere) ರೈತರ ಜೀವನಾಡಿ ಎಂದೇ ಕರೆಯಲಾಗುವ, ಭದ್ರಾ ಜಲಾಶಯ (bhadra dam) ಒಳಹರಿವಿನಲ್ಲಿ ಇಳಿಕೆಯಾಗಿದೆ. ಆದರೆ ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ (out flow).
ಆ. 3 ರ ಬೆಳಿಗ್ಗೆಯ ಮಾಹಿತಿ ಅನುಸಾರ, ಭದ್ರಾ ಜಲಾಶಯ (bhadra reservior) ಒಳಹರಿವು 30,350 ಕ್ಯೂಸೆಕ್ ಇದೆ. ಆದರೆ 56,032 ಕ್ಯೂಸೆಕ್ ನೀರನ್ನು ಡ್ಯಾಂನಿಂದ ಹೊರ ಬಿಡಲಾಗುತ್ತಿದೆ. ಇದರಿಂದ ಭದ್ರಾ ನದಿ (bhadra river) ಮೈದುಂಬಿ ಹರಿಯುತ್ತಿದೆ.
ಉಳಿದಂತೆ ಡ್ಯಾಂನ (dam) ನೀರಿನ ಮಟ್ಟವನ್ನು 180. 9 ಅಡಿಗೆ ಕಾಯ್ದುಕೊಳ್ಳಲಾಗಿದೆ. 186 ಅಡಿ ಡ್ಯಾಂನ ಗರಿಷ್ಠ ಮಟ್ಟವಾಗಿದೆ (bhadra dam water level). ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ (rain) ಮುಂದುವರೆದಿರುವುದರಿಂದ, ಒಳಹರಿವಿಗಿಂತ (inflow) ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ (out flow).
ಕಳೆದ ವರ್ಷ ಇದೇ ದಿನದಂದು, ಡ್ಯಾಂನಲ್ಲಿ ಕೇವಲ 163. 9 ಅಡಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ವರ್ಷ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ (heavy to heavy rainfall) ಪರಿಣಾಮದಿಂದ, ಜಲಾಶಯ ಗರಿಷ್ಠ ಮಟ್ಟಕ್ಕೆ ಬಂದಿದೆ.
ಉಳಿದಂತೆ ತುಂಗಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಆದರೆ ಅಬ್ಬರ ಕಡಿಮೆಯಾಗಿದೆ. ಶನಿವಾರ ಬೆಳಿಗ್ಗೆಯ ಮಾಹಿತಯಂತೆ, ಡ್ಯಾಂನ ಒಳಹರಿವು 47,568 ಕ್ಯೂಸೆಕ್ ಇದೆ. ಈಗಾಗಲೇ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ (hospet tugabhadra dam) ಹೊರ ಬಿಡಲಾಗುತ್ತಿದೆ.
ಮಳೆ ವಿವರ : ಆ. 3 ರ ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಘಟ್ಟ ಪ್ರದೇಶಗಳಾದ ಮಾಸ್ತಿಕಟ್ಟೆಯಲ್ಲಿ (masthikatte) 135 ಮಿ.ಮೀ., ಯಡೂರು (yadur) 95 ಮಿ.ಮೀ., ಮಾಣಿಯಲ್ಲಿ (mani) 100 ಮಿ.ಮೀ., ಸಾವೇಹಕ್ಲುವಿನಲ್ಲಿ (savehakklu) 155 ಮಿ.ಮೀ., ಹುಲಿಕಲ್ (hulikall) 121 ಮಿ.ಮೀ., ಚಕ್ರಾ (chakra) 143 ಮಿ.ಮೀ. ವರ್ಷಧಾರೆಯಾಗಿದೆ.
ಉಳಿದಂತೆ ಶಿವಮೊಗ್ಗದಲ್ಲಿ (shimoga) 3. 10 ಮಿ.ಮೀ., ಭದ್ರಾವತಿ (bhadravati) 1. 80 ಮಿ.ಮೀ., ತೀರ್ಥಹಳ್ಳಿ (thirthahalli) 53. 80 ಮಿ.ಮೀ., ಸಾಗರ (sagar) 56. 80 ಮಿ.ಮೀ., ಶಿಕಾರಿಪುರ (shikaripur) 5. 30 ಮಿ.ಮೀ., ಸೊರಬ (sorab) 28. 20 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagar) 48. 70 ಮಿ.ಮೀ. ಮಳೆಯಾಗಿದೆ.