
ಮಲೆನಾಡಿನಲ್ಲಿ ಕಡಿಮೆಯಾದ ಮಳೆ ಅಬ್ಬರ : ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ಇಳಿಕೆ!
ಶಿವಮೊಗ್ಗ (shivamogga), ಆ. 4: ಜಿಲ್ಲೆಯಲ್ಲಿ ಮುಂಗಾರು ಮಳೆ (monsoon rain) ಅಬ್ಬರ ಕಡಿಮೆಯಾಗಿದೆ. ನದಿಗಳ (rivers) ನೀರಿನ ಹರಿವಿನಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಪ್ರಮುಖ ಜಲಾಶಯಗಳ (dams) ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ.
ಆಗಸ್ಟ್ 4 ರ ಭಾನುವಾರದ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ (linganamakki dam) ಒಳಹರಿವು 36,601 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಇದರಿಂದ ಡ್ಯಾಂನಿಂದ ಹೊರಬಿಡುತ್ತಿರುವ (out flow) ನೀರಿನ ಪ್ರಮಾಣ 27,789 ಕ್ಯೂಸೆಕ್ ಗೆ ತಗ್ಗಿಸಲಾಗಿದೆ. ಜಲಾಶಯದ ನೀರಿನ ಮಟ್ಟ 1815. 60 (ಗರಿಷ್ಠ ಮಟ್ಟ : 1819) ವನ್ನು ಅಡಿಗೆ ಕಾಯ್ದುಕೊಳ್ಳಲಾಗಿದೆ.
ತುಂಗಾ ಜಲಾಶಯದ (tunga dam) ಒಳಹರಿವು (inflow)ಕೂಡ ಕಡಿಮೆಯಾಗಿದ್ದು, 35,957 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ, ಅಷ್ಟೇ ಪ್ರಮಾಣದ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ (tungabhadra reservoir) ಹೊರ ಬಿಡಲಾಗುತ್ತಿದೆ.
ಶಿವಮೊಗ್ಗ – ದಾವಣಗೆರೆ (shimoga – davanagere) ಜಿಲ್ಲೆಗಳ ರೈತರ ಜೀವನಾಡಿ ಎಂದೇ ಕರೆಯಲಾಗುವ, ಭದ್ರಾ ಜಲಾಶಯದ (bhadra dam) ಒಳಹರಿವು (inflow) 19,512 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಆದರೆ 29,894 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ (outflow). ಜಲಾಶಯದ ನೀರಿನ ಮಟ್ಟವನ್ನು180 (ಗರಿಷ್ಠ ಮಟ್ಟ : 186) ಅಡಿಗೆ ಕಾಯ್ದುಕೊಳ್ಳಲಾಗಿದೆ.