
ಅನಾರೋಗ್ಯದಿಂದ ಬಳಲುತ್ತಿದ್ದ ಲಯನ್ ಸಫಾರಿಯ ಸಿಂಹ ಸಾವು!
ಶಿವಮೊಗ್ಗ (shivamogga), ಆ. 5: ವಯೋ ಸಹಜ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ, ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿನ (thyavarekoppa tiger and lion safari) ಗಂಡು ಸಿಂಹವೊಂದು ಸೋಮವಾರ ಮೃತಪಟ್ಟ ಘಟನೆ ನಡೆದಿದೆ.
18 ವರ್ಷ ವಯೋಮಾನದ ಆರ್ಯ ಮೃತಪಟ್ಟ ಸಿಂಹ (arya is a dead lion) ಎಂದು ಗುರುತಿಸಲಾಗಿದೆ. ಇದು ಲಯನ್ ಸಫಾರಿಯಲ್ಲಿ (safari) ಅತ್ಯಂತ ಹಿರಿಯ ಸಿಂಹವಾಗಿತ್ತು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಆಹಾರ ಸೇವಿಸುವುದನ್ನು ನಿಲ್ಲಿಸಿತ್ತು. ಸಫಾರಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ. ನಿಯಮಾನುಸಾರ ಅರಣ್ಯ ಇಲಾಖೆಯು ಸಿಂಹದ ಮೃತದೇಹವನ್ನು ಅಂತ್ಯ ಸಂಸ್ಕಾರ ನೆರವೇರಿಸಿದೆ.
2008 ರಲ್ಲಿ ಮೈಸೂರು ಮೃಗಾಲಯದಿಂದ (mysore safari) ಆರ್ಯ ಸಿಂಹವನ್ನು (lion) ಲಯನ್ ಸಫಾರಿಗೆ ತರಲಾಗಿತ್ತು. ಅಕರ್ಷಣೆಯ ಕೇಂದ್ರವಾಗಿತ್ತು. ಪ್ರಸ್ತುತ ಸಫಾರಿಯಲ್ಲಿ ನಾಲ್ಕು ಸಿಂಹಗಳಿವೆ (lions).
In#lion, #mysorezoo, #safari, #shimogalionsafari, #shimoganews, #Shivamogga, #shivamogganews #shimoganews, #The lion of Lion Safari who was sick died!, #thyavarekoppa tiger and lion safari, #tigerandlionsafari, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಅನಾರೋಗ್ಯದಿಂದ ಬಳಲುತ್ತಿದ್ದ ಲಯನ್ ಸಫಾರಿಯ ಸಿಂಹ ಸಾವು!, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ತ್ಯಾವರೆಕೊಪ್ಪ, #ಶಿವಮೊಗ್ಗ, #ಶಿವಮೊಗ್ಗನ್ಯೂಸ್, #ಹುಲಿಸಿಂಹಧಾಮ, #ಹುಲಿಸಿಂಹಧಾಮದ