Invitation to apply for the post of driver on outsourcing basis in KSRTC Shimoga Division ಶಿವಮೊಗ್ಗ ವಿಭಾಗದ ಕೆಎಸ್ಆರ್’ಟಿಸಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ ವಿಭಾಗದ ಕೆಎಸ್ಆರ್’ಟಿಸಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ, ಆ. 6: ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (shimoga ksrtc divison) ಯಲ್ಲಿ ಖಾಲಿಯಿರುವ ಚಾಲಕ ಹುದ್ದೆಗಳ (driver post) ನೇಮಕಾತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ (shimoga), ಭದ್ರಾವತಿ (bhadravati), ಹೊನ್ನಾಳ್ಳಿ (honnalli), ಸಾಗರ (sagar), ಶಿಕಾರಿಪುರದಲ್ಲಿ (shikaripur) ಕಾರ್ಯನಿರ್ವಹಿಸಲು ಹೊರಗುತ್ತಿಗೆ (outsource) ಆಧಾರದ ಮೇಲೆ ಸದರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ ಚಾಲಕರು (drivers) ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ದಾಖಲಾತಿಗಳು : ಅರ್ಜಿಯೊಂದಿಗೆ (application) ಈ ಮುಂದಿನ ದಾಖಲಾತಿಗಳನ್ನು (documents) ಕಡ್ಡಾಯವಾಗಿ ಸಲ್ಲಿಸಬೇಕು. ‘ಆಧಾರ್ ಕಾರ್ಡ್ (aadhar card), ಡ್ರೈವಿಂಗ್ ಲೈಸೆನ್ಸ್ – driving licence (ಹೆವಿ ಲೈಸೈನ್ಸ್ ವಿತ್ ಬ್ಯಾಡ್ಜ್ ಹೆಚ್.ಪಿ.ವಿ), ಮೆಡಿಕಲ್ ಫಿಟ್ನೆಸ್ ಪ್ರಮಾಣಪತ್ರ (medical fitness certificate),

7 ನೇ ತರಗತಿ ಮೇಲ್ಪಟ್ಟ ಅಂಕಪಟ್ಟಿ (marks card), ಶಾಲಾ ವರ್ಗಾವಣೆ ಪ್ರಮಾಣಪತ್ರ (school tc), ಬ್ಯಾಂಕ್ ದಾಖಲಾತಿ (bank passbook), ಜಾತಿ ಪ್ರಮಾಣ ಪತ್ರ (cast certificate), ವಾಸ ಸ್ಥಳ ದೃಢೀಕರಣ ಪ್ರಮಾಣಪತ್ರ (Proof of Residence) ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ 0821 – 3588801, 9110692229, 8618943513 ಗೆ ಸಂರ್ಪಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

The lion of Lion Safari who was sick died! ಅನಾರೋಗ್ಯದಿಂದ ಬಳಲುತ್ತಿದ್ದ ಲಯನ್ ಸಫಾರಿಯ ಸಿಂಹ ಸಾವು! Previous post ಅನಾರೋಗ್ಯದಿಂದ ಬಳಲುತ್ತಿದ್ದ ಲಯನ್ ಸಫಾರಿಯ ಸಿಂಹ ಸಾವು!
Shimoga: Preservation of huge python! ಶಿವಮೊಗ್ಗ : ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ! Next post ಶಿವಮೊಗ್ಗ : ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ!