
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭಕ್ಕೆ ಅನುಮೋದನೆ!
ಶಿವಮೊಗ್ಗ, ಆ. 6: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (shimoga airport) ರಾತ್ರಿ ವೇಳೆ ವಿಮಾನಗಳ ಲ್ಯಾಂಡಿಂಗ್ ಗೆ ಎದುರಾಗಿದ್ದ ಅಡೆತಡೆಗೆ ಶೀಘ್ರವೇ ಮುಕ್ತಿ ದೊರಕುವ ಲಕ್ಷಣಗಳು ಗೋಚರವಾಗುತ್ತಿವೆ!
ಹೌದು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (airport) ರಾತ್ರಿ ವೇಳೆಯೂ ವಿಮಾನಗಳ ಸಂಚಾರಕ್ಕೆ (night landing) ಅನುಕೂಲವಾಗುವ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ, ಜನವರಿ 2024 ರಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು.
ಇದರಿಂದ ರಾತ್ರಿ ವೇಳೆ ವಿಮಾನಗಳ ಕಾರ್ಯಾಚರಣೆಗೆ ಆಸ್ಪದವಾಗದಂತಾಗಿತ್ತು. ಈ ನಡುವೆ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭವನ್ನು, DGCA ಅನುಮೋದಿಸಿದೆ. ಪಿಡಬ್ಲ್ಯೂಡಿಗೆ (pwd) ಕಾಮಗಾರಿ ಕಾರ್ಯಗತಗೊಳಿಸಲಿದೆ. DGCA ರೇಖಾಚಿತ್ರಗಳು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಪರಿಕಲ್ಪನೆ / ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯ ಮಟ್ಟದ ಅನುಮೋದನೆಯನ್ನು ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (loksabha member b.y.raghavendra) ಅವರು ತಿಳಿಸಿದ್ದಾರೆ.
ಜನವರಿ 2024 ರ ಹೊತ್ತಿಗೆ ಸುಮಾರು 65 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವು ಕನಿಷ್ಠ ಎರಡು ತಿಂಗಳುಗಳನ್ನು ತೆಗೆದುಕೊಳ್ಳಲಿದೆ. ಎಲ್ಲ ರೀತಿಯ ಹವಾಮಾನದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವ (enabling flight operations in all types of weather) ಮೊದಲು, DGCA ಪೂರ್ಣಗೊಂಡ ಯೋಜನೆಯನ್ನು ಮರುಪರಿಶೀಲಿಸುತ್ತದೆ.
ಈ ಎಲ್ಲಾ ಪ್ರಕ್ರಿಯೆಗಳು 3-4 ತಿಂಗಳುಗಳನ್ನು ತೆಗೆದುಕೊಳ್ಳಲಿದೆ. ಪ್ರಸ್ತುತ ಚಳಿಗಾಲ (winter season) ಆರಂಭ ವೇಳೆಗೆ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (shimoga airport) ಎಲ್ಲ ರೀತಿಯ ಹವಾಮಾನದ ವೇಳೆಯೂ ವಿಮಾನ ಕಾರ್ಯಾಚರಣೆಗೆ ಸಿದ್ದವಾಗಲಿದೆ. ಪ್ರತಿಕೂಲ ಹವಾಮಾನ, ಮಳೆ (rain), ರಾತ್ರಿ (night) ವೇಳೆ ಸೇರಿದಂತೆ ಮೊದಲಾದ ಅನಿರೀಕ್ಷಿತ ವಿಮಾನ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಅನಾನುಕೂಲತೆಗಳು ನಿವಾರಣೆಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ