
ಚಿಕ್ಕಬಳ್ಳಾಪುರ : ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ದುರುಳ ಮಗ..!
ಚಿಕ್ಕಬಳ್ಳಾಪುರ, ಆ. 7: ಮದ್ಯ ವ್ಯಸನಿ ಮಗನೋರ್ವ (An alcoholic son), ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯ, ಪೈಶಾಚಿಕ ಕೃತ್ಯ ಚಿಕ್ಕಬಳ್ಳಾಪುರ ಜಿಲ್ಲೆ (chikkaballapur district) ಗುಡಿಬಂಡೆ ತಾಲೂಕಿನ ಉಲ್ಲೋಡು ಬಳಿಯ ಚಿನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಟಿಪ್ಪರ್ ಚಾಲಕನಾಗಿ (lorry driver) ಕಾರ್ಯನಿರ್ವಹಿಸುತ್ತಿದ್ದ ಅಶೋಕ (38) ಹೀನ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈತನನ್ನು ಸ್ಥಳೀಯ ಪೊಲೀಸರು ಸೋಮವಾರ ಬಂಧಿಸಿ (arrested), ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಆಗಮಿಸಿದ್ದ ಆರೋಪಿಯು, ಮಲಗಿದ್ದ ತಾಯಿಯನ್ನು (mother) ಬಲವಂತವಾಗಿ ಮನೆಯ ಹಿಂಭಾಗ ಎಳೆದು ತಂದು ಹಲ್ಲೆ ನಡೆಸಿದ್ದ. ನಂತರ ಅತ್ಯಾಚಾರ ಎಸಗಿ (sexually harassed) ಮನೆ ಸಮೀಪದ ತಿಪ್ಪೆಗುಂಡಿ ಬಳಿ ಎಸೆದು ಹೋಗಿದ್ದ ಎನ್ನಲಾಗಿದೆ.
ಮಹಿಳೆಯ ಕಿರುಚಾಟ ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುಡಿಬಂಡೆ ಠಾಣೆ (gudibande police station) ಪೊಲೀಸರು ಬಂಧಿಸಿ, ಕೇಸ್ ದಾಖಲಿಸಿಕೊಂಡಿದ್ದಾರೆ.