Applications are invited for filling up the vacant posts in Home Guard Corps of Shimoga district ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ

189 ಗೃಹರಕ್ಷಕರ ಹುದ್ದೆಗಳು ಖಾಲಿ : ಭರ್ತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ (shivamogga), ಆ. 08: ಶಿವಮೊಗ್ಗ ಜಿಲ್ಲೆಯ ವಿವಿಧ ಗೃಹರಕ್ಷಕ ದಳದ (home guards) ಘಟಕಗಳಲ್ಲಿ ಖಾಲಿಯಿರುವ (Vacant) ಪುರುಷ ಮತ್ತು ಮಹಿಳಾ ಗೃಹರಕ್ಷಕರ ಒಟ್ಟು 189 ಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ (application invited).

ಭಾರತೀಯ ಪ್ರಜೆಯಾಗಿದ್ದು, 19 ರಿಂದ 45 ವರ್ಷ ವಯೋಮಿತಿಯಿರಬೇಕು. 10 ನೇ ತರಗತಿ ತೇರ್ಗಡೆ (sslc pass) ಹೊಂದಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರುವ ಹಾಗೂ ಪೊಲೀಸ್ ಠಾಣೆಯಲ್ಲಿ (police station) ಯಾವುದೇ ಕ್ರಿಮಿನಲ್ ಮೊಕದ್ದಮೆಗಳು/ಆರೋಪ ಅಥವಾ ಅಪರಾಧಿಯಾಗಿರದವರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು (application) ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ (home guard), ಶಾಂತ ಮ್ಯಾನ್ಷನ್, 2ನೇ ಮಹಡಿ, ಗಾಂಧಿನಗರ ಮುಖ್ಯರಸ್ತೆ, ಶಿವಮೊಗ್ಗ, ಅಥವಾ

ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 12 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಗೌರವ ಸಮಾದೇಷ್ಠರಾದ ಡಾ. ಚೇತನ ಹೆಚ್.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295630 / 255630 ಗಳನ್ನು ಸಂಪರ್ಕಿಸುವುದು. 

Marriage in the morning new couple who fought with a machete in the evening : bride died - groom's condition is critical! ಬೆಳಿಗ್ಗೆ ಮದುವೆ ಸಂಜೆ ಮಚ್ಚಿನಿಂದ ಹೊಡೆದಾಡಿಕೊಂಡ ನವ ದಂಪತಿ : ವಧು ಸಾವು – ವರನ ಸ್ಥಿತಿ ಗಂಭೀರ! Previous post ಬೆಳಿಗ್ಗೆ ಮದುವೆ, ಸಂಜೆ ಮಚ್ಚಿನಿಂದ ಹೊಡೆದಾಡಿಕೊಂಡ ನವ ದಂಪತಿ : ವಧು ಸಾವು – ವರನ ಸ್ಥಿತಿ ಗಂಭೀರ!
Tumkur district Koratagere police constable caught the thief risking his life in Bengaluru! ಬೆಂಗಳೂರಿನಲ್ಲಿ ಜೀವ ಪಣಕ್ಕಿಟ್ಟು ಕಳ್ಳನನ್ನು ಹಿಡಿದ ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸ್ ಪೇದೆ! ವರದಿ : ಬಿ. ರೇಣುಕೇಶ್ b.renukesha Next post ಬೆಂಗಳೂರಿನಲ್ಲಿ ಜೀವ ಪಣಕ್ಕಿಟ್ಟು ಕಳ್ಳನನ್ನು ಹಿಡಿದ ತುಮಕೂರು ಜಿಲ್ಲೆ ಕೊರಟಗೆರೆ  ಪೊಲೀಸ್ ಪೇದೆ!