
ಬೆಂಗಳೂರಿನಲ್ಲಿ ಜೀವ ಪಣಕ್ಕಿಟ್ಟು ಕಳ್ಳನನ್ನು ಹಿಡಿದ ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸ್ ಪೇದೆ!
ಬೆಂಗಳೂರು (bengaluru), ಆ. 8: ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣಾ (sadashivanagar traffic police station) ವ್ಯಾಪ್ತಿಯ ಸಿಗ್ನಲ್ ವೊಂದರ ಬಳಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮೋಸ್ಟ್ ವಾಟೆಂಡ್ ಕಳ್ಳನೋರ್ವನನ್ನು (thief), ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸ್ ಠಾಣೆ (tumkur koratagere police station) ಪೇದೆಯೋರ್ವರು ಜೀವ ಪಣಕ್ಕಿಟ್ಟು, ಸಿನಿಮೀಯ ಶೈಲಿಯಲ್ಲಿ ಹಿಡಿದ ಘಟನೆ ನಡೆದಿದೆ.
ದೊಡ್ಡಲಿಂಗಯ್ಯ ಎಂಬುವರೇ ಸಾಹಸಗಾಥೆ ಮೆರೆದ ಪೊಲೀಸ್ ಪೇದೆಯಾಗಿದ್ದಾರೆ (police constable) . ಆ. 5 ರಂದು ಸದರಿ ಘಟನೆ ನಡೆದಿತ್ತು. ಪೊಲೀಸ್ ಪೇದೆಯ ಸಾಹಸದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (viral video) ಆಗಿದ್ದು, ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
https://www.facebook.com/share/v/WUTmW8QgS3BovrT9/?mibextid=oFDknk
ಏನೀದು ಪ್ರಕರಣ? : ಕಳ್ಳ ಮಂಜ ಯಾನೆ 420 ಮಂಜ ಎಂಬಾತ 10 ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈತ ಸರ್ಕಾರದ ಸೌಲಭ್ಯ, ಪಿಂಚಣಿ ಕೊಡಿಸುವುದಾಗಿ ನಂಬಿಸಿ ವೃದ್ದೆಯರಿಂದ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ. ತುಮಕೂರು ಜಿಲ್ಲೆಯ ಕೊರಟಗೆರೆ ಸೇರದಿಂತೆ ಹಲವೆಡೆ ಈತನ ವಿರುದ್ದ ಪ್ರಕರಣಗಳು (case) ದಾಖಲಾಗಿದ್ದವು.
ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಕಳ್ಳ ಮಂಜನನ್ನ ಹಿಡಿಯಲು ಪೊಲೀಸರು ಕ್ರಮಕೈಗೊಂಡಿದ್ದರು. ಬೆಂಗಳೂರಿನ (bengaluru) ಮತ್ತಿಕೆರೆ ಕಡೆಯಿಂದ ಸದಾಶಿವನಗರ ಪೊಲೀಸ್ ಠಾಣೆ ಕಡೆಗೆ, ಬಿಳಿ ಬಣ್ಣದ ಹೊಂಡಾ ಆಕ್ಟಿವಾ ದ್ವಿ ಚಕ್ರ ವಾಹನದಲ್ಲಿ ಬರುತ್ತಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.
ಈ ಮಾಹಿತಿ ಆಧಾರದ ಮೇಲೆ ಪೇದೆ ದೊಡ್ಡ ಲಿಂಗಯ್ಯ ಅವರು ಸದಾಶಿವನಗರ ಠಾಣೆ ವೃತ್ತದ ಬಳಿ ಕಾದಿದ್ದು, ಆತನ ಬರುತ್ತಿದ್ದಂತೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಮಂಜ ಆಕ್ಟಿವಾ ದ್ವಿ ಚಕ್ರ ವಾಹನ ಓಡಿಸಿಕೊಂಡು ಪರಾರಿಯಾಗಲೆತ್ನಿಸಿದ್ದ.
ಆದರೆ ಈ ವೇಳೆ ದೊಡ್ಡಲಿಂಗಯ್ಯ ತಮ್ಮ ಪ್ರಾಣ ಪಣಕ್ಕಿಟ್ಟು ಬೆನ್ನಟ್ಟಿ ಹಿಡಿಯಲು ಯತ್ನಿಸಿದ್ದರು. ಈ ವೇಳೆ ಸಿಗ್ನಲ್ ನಲ್ಲಿ ಕರ್ತವ್ಯದಲ್ಲಿದ್ದ ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ಮಾಯಮ್ಮ ಹಾಗೂ ಸಾರ್ವಜನಿಕರು ಆರೋಪಿಯನ್ನು ಹಿಡಿಯುವಲ್ಲಿ ನೆರವಾಗಿದ್ದರು.