ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಗೃಹ ಸಚಿವರ ಸಕಾಲಿಕ ನೆರವಿನಹಸ್ತ..!

ಶಿವಮೊಗ್ಗ, ಮಾ. 3:  ಕಳೆದ ಎರಡು ದಿನಗಳ ಹಿಂದಷ್ಟೆ ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ರಸ್ತೆ ಅಪಾಘತದಲ್ಲಿ ಗಾಯಗೊಂಡ ಗಾಯಾಳು ಓರ್ವರಿಗೆ ಗೃಹ ಸಚಿವರು ಸಕಾಲಿಕ ನೆರವಿನ ಹಸ್ತ ಚಾಚುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು. ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ಯುವಕನೋರ್ವನಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ಸಮೀಪ ಶುಕ್ರವಾರ ನಡೆದಿದೆ.

ಹಸು ಅಡ್ಡ ಬಂದ ಕಾರಣದಿಂದ ತೀರ್ಥಹಳ್ಳಿಯ ಸಿಂಗನಬಿದರೆ ಹಳಗ ಗ್ರಾಮದ ಯುವಕನೋರ್ವ ಬೈಕ್ ನಿಂದ ಸ್ಕಿಡ್ ಆಗಿ ಬಿದ್ದ ಗಾಯಗೊಂಡಿದ್ದ. ಅದೇ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗಾಯಾಳುವನ್ನು ಗಮನಿಸಿ ವಾಹನ ನಿಲ್ಲಿಸಿ ಸ್ಥಳಕ್ಕಾಗಮಿಸಿದ್ದಾರೆ.

ಗಾಯಾಳುವಿಗೆ ತಮ್ಮ ಬೆಂಗಾವಲು ಪಡೆಯ ವಾಹನದ ಮೂಲಕ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಗೃಹ ಸಚಿವರ ಸಕಾಲಿಕ ಸಹಾಯ ಹಸ್ತಕ್ಕೆ ಸ್ಥಳದಲ್ಲಿದ್ದ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Previous post ಅಗ್ನಿವೀರ್ ನೇಮಕಾತಿಗೆ ನೋಂದಣಿ ಆರಂಭ
Next post <strong>ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ..!</strong>