Murder case : Life imprisonment for 7 youths of Shimoga! ಕೊಲೆ ಪ್ರಕರಣ : ಶಿವಮೊಗ್ಗದ 7 ಯುವಕರಿಗೆ ಜೀವಾವಧಿ ಶಿಕ್ಷೆ!

ಕೊಲೆ ಪ್ರಕರಣ : ಶಿವಮೊಗ್ಗದ 7 ಯುವಕರಿಗೆ ಜೀವಾವಧಿ ಶಿಕ್ಷೆ!

ಶಿವಮೊಗ್ಗ, ಆ. 10: ಕೊಲೆ ಪ್ರಕರಣವೊಂದರಲ್ಲಿ (murder case) 7 ಯುವಕರಿಗೆ ಜೀವಾವಧಿ ಶಿಕ್ಷೆ (life imprisonment) ವಿಧಿಸಿ ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಶಿವಮೊಗ್ಗ (shimoga) ಆರ್.ಎಂ.ಎಲ್ ನಗರ ನಿವಾಸಿ ಲತೀಫ್ (20), ಟಿಪ್ಪುನಗರದ ಪರ್ವೇಜ್ ಯಾನೆ ಪರ್ರು (23), ಸೈಯದ್ ಜೀಲಾನ್ ಯಾನೆ ಜೀಲಾ (19), ಜಾಫರ್ ಸಾಧಿಕ್ (29), ಮಹಮ್ಮದ್ ಶಾಬಾಜ್ ಯಾನೆ ಶಾಬು (19),

ಅಬ್ದುಲ್ ಶಾಬೀರ್ ಯಾನೆ ಶಾಬೀರ್ (24) ಹಾಗೂ ತಸ್ಲೀಂ ಯಾನೆ ಮೊಹಮ್ಮದ್ ಯೂಸೂಫ್ (26) ಶಿಕ್ಷೆಗೊಳಗಾದ ಯುವಕರೆಂದು ಗುರುತಿಸಲಾಗಿದೆ. ಸದರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಸೈಯದ್ ರಾಜೀಕ್ ಯಾನೆ ರಾಜಿಕ್ (28) ಎಂಬಾತ ಮೃತಪಟ್ಟಿದ್ದಾನೆ.

ಅಪರಾಧಿಗಳಿಗೆ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ಕೊಲೆಗೀಡಾದ ವ್ಯಕ್ತಿಯ ಪತ್ನಿಗೆ 30 ಸಾವಿರ ರೂ. ನೀಡುವಂತೆ ನ್ಯಾಯಾಧೀಶರಾದ (judge) ಪಲ್ಲವಿ ಬಿ. ಆರ್. ಅವರು 9-8-2024 ರಂದು ನೀಡಿದ ತೀರ್ಪಿನಲ್ಲಿ (judgement) ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ಓ.ಪುಷ್ಪಾ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ಗಾಂಜಾ ಮಾರಾಟದ (ganja) ವಿಚಾರಕ್ಕೆ ಸಂಬಂಧಿಸಿದಂತೆ, 18-9-2021 ರಂದು ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ (shimoga tunganagara police station) ವ್ಯಾಪ್ತಿಯ ಟಿಪ್ಪುನಗರ 7 ನೇ ಮುಖ್ಯ ರಸ್ತೆ 4 ನೇ ಕ್ರಾಸ್ ಸಮೀಪ, ಅಣ್ಣಾನಗರ ನಿವಾಸಿ ಇರ್ಫಾನ್ ಯಾನೆ ಟ್ವಿಸ್ಟ್ ಇರ್ಫಾನ್ ಎಂಬ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ (Murder by stabbing) ಮಾಡಲಾಗಿತ್ತು.

ಇನ್ಸ್’ಪೆಕ್ಟರ್ (inspector) ಎಂ. ದೀಪಕ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ಹತ್ಯೆಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (chargesheet) ದಾಖಲಿಸಿದ್ದರು.

'BJP-JDS Conspiracy' : CM Siddaramaiah ‘ಬಿಜೆಪಿ - ಜೆಡಿಎಸ್ ಷಡ್ಯಂತ್ರಕ್ಕೆ ಬಲಿಯಾಗಲ್ಲ’ : ಸಿಎಂ ಸಿದ್ದರಾಮಯ್ಯ Previous post ‘ಬಿಜೆಪಿ – ಜೆಡಿಎಸ್ ಷಡ್ಯಂತ್ರಕ್ಕೆ ಬಲಿಯಾಗಲ್ಲ’ : ಸಿಎಂ ಸಿದ್ದರಾಮಯ್ಯ
Gauri-Ganesha festival : Police warning to Shimoga rowdies! ಗೌರಿ-ಗಣೇಶ ಹಬ್ಬ : ಶಿವಮೊಗ್ಗ ರೌಡಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್! Next post ಗೌರಿ-ಗಣೇಶ, ಈದ್ ಮಿಲಾದ್ ಹಬ್ಬ : ಶಿವಮೊಗ್ಗ ರೌಡಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್!